ಶಿರೂರು ಗುಡ್ಡ ಕುಸಿತ ಪ್ರಕರಣ: ಲಾರಿಯ ಮತ್ತಷ್ಟು ಬಿಡಿಭಾಗಗಳು ಪತ್ತೆ
ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಗುಡ್ಡ ಕುಸಿತದಲ್ಲಿ ನದಿ ಸೇರಿದ ಮೂವರ ಹುಡುಕಾಟ ನಡೆದಿದ್ದು, ಮೂರನೇ ದಿನ , ಲಾರಿಯ ಚಕ್ರಗಳು, ಹೈಟೆನ್ಶನ್ ವಯರ್ ಹಾಗೂ ಕಂಬದ ಬಿಡಿಭಾಗಗಳು ಸಿಕ್ಕಿವೆ.ಕೆಲ ಬಟ್ಟೆಗಳು ಸಹ ದೊರೆತಿವೆ. ಕಾರ್ಯಾಚರಣೆ ಒಂದೊಂದೇ ಹೆಜ್ಜೆ ಮುಂದೆ ಸಾಗುತ್ತಿದೆ.
ಸೇನೆಯ ನಿವೃತ್ತ ಮೇಜರ್ ಇಂದ್ರ ಬಾಲನ್
ಸೇನೆಯ ನಿವೃತ್ತ ಮೇಜರ್ ಇಂದ್ರ ಬಾಲನ್ ಕಾರ್ಯಾಚರಣೆ ಸ್ಥಳಕ್ಕೆ ಆಗಮಿಸಿದ್ದು, ನಾಳೆ ಕೇರಳದ ಭಾರತ್ ಬೆಂಜ್ ಲಾರಿ ಇರುವ ಕಡೆ ಡ್ರಜ್ಜಿಂಗ್ ಯಂತ್ರದ ಮೂಲಕ ಹುಡುಕಾಟಕ್ಕೆ ತಾಂತ್ರಿಕ ಸಲಹೆ ನೀಡಲಿದ್ದಾರೆ. ಈ ವರೆಗೆ ನಡೆದ ಕಾರ್ಯಾಚರಣೆಯನ್ನು ಪ್ರಶಂಸಿಸಿದ್ದಾರೆ.
ನೇವಿ ಸೋನಾರ್ ಟೆಕ್ನಾಲಜಿ ಮೂಲಕ ಕಬ್ಬಿಣದ ವಸ್ತು ನದಿಯಲ್ಲಿ ಇರುವ ಬಗ್ಗೆ ಸುಳಿವು ನೀಡಿತ್ತು . ನೀರಲ್ಲಿ ವಸ್ತು ಪತ್ತೆ ಹಚ್ಚುವ ರೆಡಾರ್ ತಂತ್ರಜ್ಞಾನವನ್ನು ಇಂದ್ರಬಾಲನ್ ಬಳಸಿದ್ದರು. ನದಿಯಲ್ಲಿ ಅವಶೇಣಗಳು ಇರುವ ನಾಲ್ಕು ಸ್ಥಳಗಳನ್ನು ಅವರು ಗುರುತಿಸಿದ್ದರು . ನಾಳೆ ಲಾರಿ ಇರುವ ನಾಲ್ಕನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ನಡೆಯಲಿದೆ.