ಬೆಳ್ತಂಗಡಿ: ಜೂಜಾಟದ ಅಡ್ಡೆಗೆ ಪೊಲೀಸರು ದಾಳಿ: 20ಕ್ಕೂ ಅಧಿಕ ಮಂದಿಯ ಬಂಧನ
ಬೆಳ್ತಂಗಡಿ: ಜೂಜಾಟ ನಡೆಸುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ಜೂಜಾಟದಲ್ಲಿ ನಿರತರಾಗಿದ್ದ 20 ಕ್ಕೂ ಅಧಿಕ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಶೆಡ್‌ನೊಳಗೆ ಸುಮಾರು 15-20 ಜನರು ಅಕ್ರಮವಾಗಿ ಹಣ ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿ –ಪಿದಾಯಿ (ಅಂದರ್-ಬಹಾರ್ ) ಎಂಬ ಅದೃಷ್ಟದ ಆಟವನ್ನು ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪುಂಜಾಲಕಟ್ಟೆ ಪೊಲೀಸರು ದಾಳಿ ಮಾಡಿದ್ದಾರೆ.
ಸ್ವಾಧೀನಪಡಿಸಿಕೊಂಡಿರುವ ನಗದು ಸೇರಿ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 36. 729/- ಆಗಬಹುದು.ಆರೋಪಿಗಳನ್ನು ಮೊನಪ್ಪ ಪೂಜಾರಿ, ಅಬ್ದುಲ್ ಖಾದರ್, ಮೊಹಮ್ಮದ್ ಹೈದರ್, ಜೋಸ್ ತೋಮಸ್, ಅಬೂಬಕ್ಕರ್, ಲೋಕನಾಥ ಬಂಗೇರ ತುಕರಾಮ್, ಅಬ್ದುಲ್ ರಹಿಮಾನ್, ಯಶೋಧರ, ರಮೇಶ್ ಆಚಾರ್ಯ, ಜಿ.ಎ.ದಾವೂದ್, ರಿಯಾಜ್ ಮೊಹಮ್ಮದ್, ಅಬೂಬಕ್ಕರ್ ಅಬ್ದುಲ್ ರವೂಫ್, ಮುಸ್ತಾಫ, ಎಂ.ಅಶ್ರಫ್, ರಮೇಶ್.ಕೆ, ಅಬ್ದುಲ್ ರಝಾಕ್, ಕಮಲಾಕ್ಷ ದಾಸ್, ವಿಜಯ ಕುಮಾರ್, ಮಜೀದ್ ಯಾನೆ ಅಬ್ದುಲ್ ಮಜೀದ್, ಶ್ರೀಧರ ಪೂಜಾರಿ, ಮುಸ್ತಾಫ, ಎಂದು ಗುರುತಿಸಲಾಗಿದೆ.