December 19, 2025

ಉಡುಪಿಯಿಂದ ಕಾಪುವಿಗೆ ಬರುತ್ತಿದ್ದ ಖಾಸಗಿ ಬಸ್ ಹೆದ್ದಾರಿ ಬದಿಯ ಮರಕ್ಕೆ ಢಿಕ್ಕಿ

0
image_editor_output_image1472080160-1726555395701.jpg

ಕಾಪು : ಉಡುಪಿಯಿಂದ ಕಾಪುವಿಗೆ ಬರುತ್ತಿದ್ದ ಖಾಸಗಿ ಸರ್ವಿಸ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಿಗ್ಗೆ ಕಾಪುವಿನಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿ ದಂಡತೀರ್ಥದಲ್ಲಿ ಈ ಘಟನೆ ಸಂಭವಿಸಿದ್ದು ಬಸ್ಸಿನಲ್ಲಿದ್ದ ಓರ್ವ ಮಹಿಳೆಗೆ ಗಾಯಗಳುಂಟಾಗಿವೆ.

ಉಡುಪಿಯಿಂದ ಕಾಪುವಿಗೆ ಬರುತ್ತಿದ್ದ ಬಸ್ ನಲ್ಲಿ 6-7 ಮಂದಿ ಪ್ರಯಾಣಿಕರು ಮಾತ್ರ ಇದ್ದುದ್ದರಿಂದ ಮತ್ತು ಬಸ್ ಕೂಡಾ ನಿಧಾನವಾಗಿ ಸಂಚರಿಸುತ್ತಿದ್ದುದರಿಂದ ಹೆಚ್ಚಿನ ಅಪಾಯವುಂಟಾಗಿಲ್ಲ.
ಸ್ಥಳೀಯರು ಬಸ್ ನಲ್ಲಿದ್ದವರಿಗೆ ಹೊರಗೆ ಬರಲು ಸಹಕರಿಸಿದ್ದು ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!