ನಾಳೆ ಏನಾದರೂ ಜಿಲ್ಲೆಯಲ್ಲಿ ಶಾಂತಿ ಕದಡಿದರೆ ಅದಕ್ಕೆ ಕಾಂಗ್ರೆಸ್ ನಾಯಕರೇ ನೇರ ಕಾರಣ: ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು: ನಾಳೆ (ಸೋಮವಾರ) ನಡೆಯಲಿರುವ ಈದ್ ಮಿಲಾದ್ ರ್ಯಾಲಿ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಮುಖ ನಾಯಕ ಶರಣ್ ಪಂಪ್ವೆಲ್ ಅವರು ತಾಕತ್ತಿದ್ದರೆ ಬಿ.ಸಿ ರೋಡ್ ಗೆ ಬರಲಿ ಎಂದು ಬೆದರಿಕೆ ರೂಪದ ವಾಯ್ಸ್ ಮೆಸೇಜನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಜಿಲ್ಲೆಯಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡಿರುವ ಕ್ರಿಮಿನಲ್ ಹಿನ್ನಲೆಯುಳ್ಳ ಕಾಂಗ್ರೆಸ್ ನಾಯಕ, ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಎಂಬಾತನನ್ನು ಪೊಲೀಸರು ಕೂಡಲೇ ಬಂಧಿಸಿ ಹೆಡೆಮುರಿ ಕಟ್ಟುವಂತೆ ಶಾಸಕ ವೇದವ್ಯಾಸ ಕಾಮತ್ ಅವರು ಆಗ್ರಹಿಸಿದರು.
ಈ ಕೋಮು ಪ್ರಚೋದನೆಯ ಹಿಂದೆ, ನಾಳೆ ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಯಲ್ಲಿ ಅವರೇ ಗಲಭೆ ಎಬ್ಬಿಸಿ ಅದನ್ನು ಹಿಂದೂ ಸಂಘಟನೆಗಳ ತಲೆಗೆ ಕಟ್ಟುವ ಷಡ್ಯಂತ್ರವೂ ಅಡಗಿರಬಹುದು. ಹಾಗಾಗಿ ನಾಳೆ ಏನೇ ಅಹಿತಕರ ಘಟನೆ ಸಂಭವಿಸಿ ಜಿಲ್ಲೆಯಲ್ಲಿ ಶಾಂತಿ ಕದಡಿದರೆ ಅದಕ್ಕೆ ನೇರ ಕಾರಣ ಅವರೇ ಆಗಿರುತ್ತಾರೆ. ಪೊಲೀಸ್ ಇಲಾಖೆ ಇಂತಹ ಕೋಮು ಕ್ರಿಮಿಗಳ ಮೇಲೆ ಯಾವುದೇ ಮುಲಾಜಿಲ್ಲದೇ ಈ ಕೂಡಲೇ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.





