February 3, 2026

ಕಾಸರಗೋಡು: ವಿವಿಧೆಡೆ ಕಳವು ಪ್ರಕರಣ: ಉಪ್ಪಿನಂಗಡಿ ಮೂಲದ ಆರೋಪಿಯ ಬಂಧನ

0
image_editor_output_image1329430258-1726220668576.jpg

ಕಾಸರಗೋಡು: ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿಯೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉಪ್ಪಿನಂಗಡಿ ನಿವಾಸಿ ಮುಹಮ್ಮದ್ ಹನೀಫ್ ( 34) ಬಂಧಿತ ಆರೋಪಿ.ಮೂಲತಃ ಮಂಜೇಶ್ವರ ಮಚ್ಛಂಪಾಡಿ ನಿವಾಸಿಯಾಗಿರುವ ಈತ ನನ್ನು ಬುಧವಾರ ರಾತ್ರಿ ಮಂಜೇಶ್ವರ ಸಮೀಪದಿಂದ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ವಶಕ್ಕೆ ಪಡೆದು ವಿಚಾರಿಸಿದಾಗ ಈತ ಹಲವು ಪ್ರಕರಣ ಆರೋಪಿ ಎಂದು ತಿಳಿದುಬಂದಿದೆ.

ಜುಲೈ ೧೨ ರಂದು ಸುಂಕದಕಟ್ಟೆ ನೆಚ್ಚಿಲಪದವು ಎಂಬಲ್ಲಿ ಬೀಗ ಜಡಿದ ಮನೆಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕಳವು ಗೈದ ಪ್ರಕರಣದ ಆರೋಪಿಯಾಗಿದ್ದಾನೆ.
ಈತನ ವಿರುದ್ಧ ಕರ್ನಾಟಕದ ವಿವಿಧೆಡೆ ಹಲವು ಪ್ರಕರಣಗಳಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ

Leave a Reply

Your email address will not be published. Required fields are marked *

error: Content is protected !!