ಮಂಗಳೂರು: ಬಸ್‌ನ ಫುಟ್ ಬೋರ್ಡ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು
ಮಂಗಳೂರು: ಖಾಸಗಿ ಬಸ್‌ನ ಫುಟ್ ಬೋರ್ಡ್ ಮೇಲೆ ನೇತಾಡಿಕೊಂಡು ವಿದ್ಯಾರ್ಥಿಗಳು ಪ್ರಯಾಣಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸರು ಬಸ್ ಸೀಝ್ ಮಾಡಿ ಜಪ್ಪಿನಮೊಗರಿನಲ್ಲಿರುವ ಟ್ರಾಫಿಕ್ ದಕ್ಷಿಣ ಪೊಲೀಸ್ ಠಾಣೆಯ ಆವರಣದಲ್ಲಿ ಇರಿಸಿದ್ದಾರೆ.
ತಲಪಾಡಿ ಮಾರ್ಗದಲ್ಲಿ ಸಂಚರಿಸುವ ಸೈಂಟ್ ಅ್ಯಂಟೋನಿ ಎಂಬ 42 ನಂಬರ್‌ನ ಬಸ್ ಇದಾಗಿದ್ದು, ವಿದ್ಯಾರ್ಥಿಗಳು ಫುಡ್ ಬೋರ್ಡ್ ಮೇಲೆ ಪ್ರಯಾಣ ಮಾಡಿದ್ದಾರೆ. ಬಸ್ ನಿಲ್ಲುವ ವೇಳೆ ಯುವಕನೊಬ್ಬ ಬಸ್‌ನಿಂದ ಬೀಳುವ ದೃಶ್ಯ ಕೂಡ ಈ ವಿಡಿಯೋದಲ್ಲಿ ಸೆರೆಯಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಈ ಬಸ್‌ನಲ್ಲಿ ವಿದ್ಯಾರ್ಥಿಗಳ ಈ ಅಪಾಯಕಾರಿ ಪ್ರಯಾಣದ ಬಗ್ಗೆ ಜನರು ಪ್ರಶ್ನೆ ಮಾಡಿದ್ದಾರೆ. ಬಸ್ ಓವರ್‌ಲೋಡ್ ಆಗಿದ್ರೂ ಮತ್ತೆ ಜನರನ್ನು ಹತ್ತಿಸಿಕೊಳ್ಳುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಜೀವಕ್ಕೆ ಅಪಾಯವಾದ್ರೆ ಯಾರು ಹೊಣೆ ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಮನವಿ ಕೂಡ ಮಾಡಿದ್ದಾರೆ.





