December 19, 2025

ಪುತ್ತೂರು: ಬೈಕ್ ಸ್ಕಿಡ್: ಬಜರಂಗದಳದ ಕಾರ್ಯಕರ್ತ ಮೃತ್ಯು

0
image_editor_output_image933084913-1726117563459

ಪುತ್ತೂರು: ಕುಂಬ್ರ ಬೆಳ್ಳಾರೆ ರಾಜ್ಯ ಹೆದ್ದಾರಿಯಲ್ಲಿದ್ದ ಮರಣ ಗುಂಡಿ ದ್ವಿಚಕ್ರ ವಾಹನ ಸವಾರನನ್ನು ಬಲಿ ಪಡೆದಿದೆ. ಮಧ್ಯರಾತ್ರಿ ರಸ್ತೆಯಲ್ಲಿದ್ದ ಗುಂಡಿಗೆ ವಾಹನ ಸಿಲುಕಿ ಸ್ಕಿಡ್‌ ಆಗಿ ಬೈಕ್‌ ಸವಾರ ಗಂಭೀರ ಗಾಯಗೊಂಡ ಘಟನೆ ಸೆ.10 ರಂದು ಮಧ್ಯರಾತ್ರಿ ನಡೆದಿತ್ತು. ಗಂಭೀರ ಗಾಯಗೊಂಡಿದ್ದ ಅವರು ಸೆ.11ರ ಮಧ್ಯರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೆಯ್ಯರು ಗ್ರಾಮದ ಎರಕ್ಕಳ ಬೆಳಿಯಪ್ಪ ಗೌಡರವರ ಪುತ್ರ ಕೀರ್ತನ್ ಗೌಡ ಎಂಬವರು ಮೃತಪಟ್ಟವರು. ಸೆ.10 ರಂದು ಮಧ್ಯರಾತ್ರಿ ಕೀರ್ತನ್ ಗೌಡ ಚಲಾಯಿಸಿಕೊಂಡು ಬರುತ್ತಿದ್ದ ಆಕ್ಟಿವಾ ಸ್ಕೂಟರ್ ತ್ಯಾಗರಾಜನಗರದ ಬಸ್ಸು ನಿಲ್ದಾಣದ ಎದುರು, ರಸ್ತೆಯಲ್ಲಿ ನಿರ್ಮಾಣವಾಗಿದ್ದ ಗುಂಡಿಗೆ ಬಿದಿದ್ದೆ. ತತ್ಪರಿಣಾಮ ರಸ್ತೆಗೆ ಉರುಳಿ ಬಿದ್ದ ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ಪುತ್ತೂರಿನಲ್ಲಿ ಶ್ರೀ ಗಣೇಶನ ಶೋಭಾಯಾತ್ರೆಯಲ್ಲಿ ಭಾಗವಾಹಿಸಿ ಕೀರ್ತನ್‌ ತಡ ರಾತ್ರಿ 11.30ರ ಸುಮಾರಿಗೆ ಮನೆಗೆ ವಾಪಸ್ಸಾಗುತ್ತಿದ್ದರು.

ಸ್ಕೂಟರ್ ಬಿದ್ದ ಶಬ್ದ ಕೇಳಿಸಿ ಬಂದ ಸ್ಥಳೀಯ ಮನೆಯವರು ಗಾಯಗೊಂಡಿದ್ದ ಕೀರ್ತನಬ್‌ ಅವರನ್ನು ತಕ್ಷಣವೇ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಯುವಕ ಪುತ್ತಿಲ ಪರಿವಾರ , ವಿಹಿಂಪ , ಬಜರಂಗದಳ ಇತ್ಯಾದಿ ಹಿಂದೂ ಪರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ರಸ್ತೆಯ ಗುಂಡಿಯ ಕುರಿತಾಗಿ ಹಲವರು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರು ಯಾವುದೇ ಕ್ರಮ ಕೈಗೊಂಡಿರಲಿಲ್ಲ . ಇದೀಗ ಇಲಾಖೆಯ ಬೇಜವಬ್ದಾರಿಗೆ ಯುವಕ ಬಲಿಯಾಗಿದ್ದಾನೆ

Leave a Reply

Your email address will not be published. Required fields are marked *

You may have missed

error: Content is protected !!