ಕೊಳ್ನಾಡು: ಎಸ್ ಡಿಪಿಐ ನಾಯಕರ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ
ವಿಟ್ಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೊಳ್ನಾಡು ಬ್ಲಾಕ್ ಸಮಿತಿ ವತಿಯಿಂದ ಹೊಸದಾಗಿ ಬ್ರಾಂಚ್ ಮಟ್ಟದಲ್ಲಿ ಆಯ್ಕೆಯಾದ ನಾಯಕರಿಗೆ ನಾಯಕತ್ವ ತರಬೇತಿ ಶಿಬಿರ ಕೊಳ್ನಾಡು ಬ್ಲಾಕ್ ಅಧ್ಯಕ್ಷರಾದ ಕಲಂದರ್ ಪರ್ತಿಪ್ಪಾಡಿ ಅಧ್ಯಕ್ಷತೆಯಲ್ಲಿ ಕೊಳ್ನಾಡು ಸೌಹಾರ್ಧ ಭವನದಲ್ಲಿ ಜರಗಿತು.
ಜಿಲ್ಲಾ ಅದ್ಯಕ್ಷರಾದ ಅನ್ವರ್ ಸಾದತ್ ಅವರು ನಾಯಕತ್ವದ ಬಗ್ಗೆ ತರಗತಿ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಬಂಟ್ವಾಳ ಪುರಸಭೆಯ ನೂತನ ಉಪಾದ್ಯಕ್ಷರಾಗಿ ಆಯ್ಕೆಯಾದ ಮೂನಿಷ್ ಆಲಿ ಅವರನ್ನು ಕೊಳ್ನಾಡು ಬ್ಲಾಕ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಪಕ್ಷದ ವಿವಿಧ ಸ್ತರಗಳ ನಾಯಕರು, ಪಂಚಾಯತ್ ಸದಸ್ಯರು ನಾಯಕತ್ವ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.





