ಮಂಜೇಶ್ವರಂ ತಾಲೂಕು ಆಸ್ಪತ್ರೆ ಕಟ್ಟಡ ನಿರ್ಮಾಣ ವಿಳಂಬ ಖಂಡಿಸಿ ಎನ್ಸಿಪಿಎಸ್ ನಿಂದ ಪ್ರತಿಭಟನೆ
ಮಂಜೇಶ್ವರ: ಮಂಜೇಶ್ವರ ತಾಲೂಕಿನ ರೋಗಿಗಳು ಆಶ್ರಯಿಸಿರುವ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕಿಪ್ಬಿ ಫಂಡ್ ಉಪಯೋಗಿಸಿ. ಕೂಡಲೇ ಕಟ್ಟಡ ನಿರ್ಮಾಣದ ಕಾಮಾಗಾರೀ ಆರಂಭಿಸಬೇಕು ಎಂದು ಆಗ್ರಹಿಸಿ ಎನ್.ಸಿ. ಪಿ(ಎಸ್) ಮಂಜೇಶ್ವರಂ ಬ್ಲಾಕ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಯಿತು.
ಪ್ರತಿಭಟನೆಯ ಹಲವರು ಪಾಲ್ಗೊಂಡಿದ್ದರು. ಧರಣಿಯನ್ನು ಜಿಲ್ಲಾಧ್ಯಕ್ಷ ಕರೀಂ ಚಂತೇರ ಉದ್ಘಾಟಿಸಿದರು. ಆಸ್ಪತ್ರೆ ನಿರ್ಮಾಣ ಕಾಮಗಾರಿ ವಿಷಯದಲ್ಲಿ ಶಾಸಕರು ಹಾಗೂ ಮಂಜೇಶ್ವರಂ ಬ್ಲಾಕ್ ಪಂಚಾಯತ್ ಸಂಪೂರ್ಣ ವಿಫಲವಾಗಿದ್ದು, ಸರಕಾರದ ಮೇಲೆ ಒತ್ತಡ ಹೇರಿ.
ಸಚಿವರ ಮಧ್ಯಸ್ಥಿಕೆಯಿಂದ ಕೂಡಲೇ ಕಟ್ಟಡದ ಕಾಮಾಗಾರೀ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದಾಗಿ
ಕರೀಂ ಚಂತೇರಾ ಅವರು ಶ್ರಮಿಸುವುದಾಗಿ ಭರವಸೆ ನೀಡಿದರು. ಬ್ಲಾಕ್ ಅಧ್ಯಕ್ಷ ಮಹ್ಮದ್ ಕೈಕಂಬ ಅಧ್ಯಕ್ಷತೆವಹಿಸಿದ್ದರು. ರಾಜ್ಯ
ಕಾರ್ಯದರ್ಶಿ ಸಿ.ಬಾಲನ್, ಜಿಲ್ಲಾ ಉಪಾಧ್ಯಕ್ಷರಾದ
ರಾಜು ಕೋಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ
ಟಿ. ನಾರಾಯಣನ್, ಉದಿನೂರು ಸುಕುಮಾರನ್, ಜುಬೇರ್ ಪಡುಪ್, ಸಿದ್ದಿಕ್ ಕೈಕಂಬ, ಸೀನತ್ ಸತೀಶನ್, ಅಲ್ಪಸಂಖ್ಯಾತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಮೀದ್ ಚೆರೆಂಗಾಯಿ, ಮಹಮ್ಮದ್ ಅನಬಾಗಿಲು, ಖದೀಜಾ ಮೊಗ್ರಾಲ್,
ಉಪಸ್ಥಿತರಿದ್ದರು.
ಬ್ಲಾಕ್ ಮತ್ತು ಮಂಡಲ ಪದಾಧಿಕಾರಿಗಳಾದ ಅಶ್ರಫ್ ಪಚಿಲಂ ಪಾರ, ಅಬ್ದುಲ್ ರೆಹಮಾನ್ ಹಾಜಿ, ಸುರೇಂದ್ರನ್ ಉಪ್ಪಳ, ಇಬ್ರಾಹಿಂ ಹಾಜಿ, ನಾಸರ್ ಉಪ್ಪಳ, ಹರೀಶ್ ಕುಮಾರ್, ಜಮೀಲಾ ಹಮೀದ್, ತಾಹಿರಾ ಕೋಟಿಬೈಲ್, ರಿಝ್ವಾನಾ ಫಿರ್ದೌಸ್ ನಗರ ಮೊದಲಾದವರು ನೇತ್ರತ್ವ ವಹಿಸಿದ್ದರು





