ಮಿನಿ ಟ್ರಕ್ ಪಲ್ಟಿ: 7 ಜನರು ಸಾವು
ಪೂರ್ವ ಗೋದಾವರಿ: ಮಿನಿ ಟ್ರಕ್ ಪಲ್ಟಿಯಾಗಿ ಏಳು ಜನರು ಸಾವನ್ನಪ್ಪಿದ ಭೀಕರ ಅವಘಡ ಪೂರ್ವ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ದೇವರಪಲ್ಲಿ ಮಂಡಲದ ಚಿನ್ನೈಗುಡೆಂನ ಚಿಲಕ ಪಾಕಲಾ ಪ್ರದೇಶದಲ್ಲಿ ಬುಧವಾರ(ಸೆ 11) ರಂದು ಸಂಭವಿಸಿದೆ.
“ಅವಘಡದಲ್ಲಿ ಏಳು ಜನ ಸಾವನ್ನಪ್ಪಿದ್ದು, ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೂರ್ವ ಗೋದಾವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನರಸಿಂಹ ಕಿಶೋರ್ ಸುದ್ದಿಗಾರರಿಗೆ ತಿಳಿಸಿದರು.
ಗೋಡಂಬಿ ತುಂಬಿದ್ದ ಮಿನಿ ಟ್ರಕ್ ಟಿ ನರಸಾಪುರಂ ಮಂಡಲದ ಬೊರ್ರಂಪಾಲೆಂನಿಂದ ನಿಡದವೋಲು ಮಂಡಲದ ತಾಡಿಮಲ್ಲ ಕಡೆಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಜನರು ಗೋಡಂಬಿಯ ಚೀಲಗಳ ಅಡಿಯಲ್ಲಿ ಸಿಲುಕಿದ ನಂತರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ.





