ವಿಟ್ಲ: ಜೆಸಿಐ ಸಪ್ತಾಹದ 2ನೇ ದಿನದ ಕಾರ್ಯಕ್ರಮ
ಜೆಸಿಐ ವಿಟ್ಲದ “ಜೆಸಿಐ ಸಪ್ತಾಹ 2024″2ನೇ ದಿನದ ಕಾರ್ಯಕ್ರಮ Invest in skill &Invest in health ಕಾರ್ಯಕ್ರಮ ವಿಠಲ ಪ್ರೌಢ ಶಾಲೆಯಲ್ಲಿ ನಡೆಯಿತು.
ಜೆಸಿಐ ವಿಟ್ಲದ ಪೂರ್ವ ಅಧ್ಯಕ್ಷರು ಆದ ಜೆಸಿ. HGF ಶ್ರೀ ಪ್ರಕಾಶ್ ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಪೂರ್ವ ಅಧ್ಯಕ್ಷರು ಆದ ಜೆಸಿ. ಸೆನೆಟರ್ ಬಾಬು ಕೆ. ವಿ, ಲಯನ್ಸ್ ಕ್ಲಬ್ ವಿಟ್ಲದ ಅಧ್ಯಕ್ಷರು ಆದ ಲಯನ್. ರಜತ್ ಆಳ್ವ ಹಾಗೂ ಉಪ ಪ್ರಾಂಶುಪಾಲರು ಆದ ಕಿರಣ್ ಕುಮಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತರಬೇತು ದಾರರಾಗಿ ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಅಧಿಕಾರಿ ಜೆಸಿ. ರಾಧಾಕೃಷ್ಣ ಎ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯದರ್ಶಿ ಜೆಸಿ. ಮುರಳಿ ಪ್ರಸಾದ್, ಕಾರ್ಯಕ್ರಮ ನಿರ್ದೇಶಕ ಜೆಸಿ. ಆರ್ಥಿಕ್, ಜೆಸಿ. ಕ್ಲಿಫರ್ಡ್ ವೇಗಸ್, ಪೂರ್ವ ಅಧ್ಯಕ್ಷರು ಜೆಸಿ. ರಮೇಶ್, ಮತ್ತು ಜೆಸಿ ಸುಧೀರ್ ನಾಯ್ಕ್ ಸಹಕರಿಸಿದರು.





