ನದಿಯಲ್ಲಿ ಈಜಲು ಹೋಗಿ ಯುವಕ ನೀರುಪಾಲು
ಕಮಲಾವತಿ ನದಿಯಲ್ಲಿ ಈಜಲು ಹೋಗಿ ಯುವಕ ನಾಪತ್ತೆಯಾಗಿರುವ ಘಟನೆ ರವಿವಾರ ಸುಮಾರು 12 ಗಂಟೆಗೆ ನಡೆದಿದೆ.ರಾಹುಲ್ ನಾಗಪ್ಪ ಯಳ್ಳಿ (17) ಈಜಲು ಹೋಗಿ ಯುವಕ ನಾಪತ್ತೆಯಾದ ಯುವಕ.
ಇತ್ತೀಚಿಗೆ ತಾಲೂಕಿನ ಸಂಗಾವಿಯಲ್ಲಿ ವ್ಯಕ್ತಿಯೋರ್ವ ಕೊಚ್ಚಿಹೋದ ಘಟನೆ ಮಾಸುವ ಮುನ್ನವೇ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ಸಿಪಿಐ ಮಹಾದೇವ ದಿಡ್ಡಿಮನಿ, ಪಿಎಸ್‌ಐ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ ಮುಳುಗು ತಜ್ಞರನ್ನು ಕರೆಸಿ ತೀವ್ರ ಹುಡುಕಾಟದಲ್ಲಿ ಇದ್ದರೆ ಇನ್ನೂ ಕೂಡ ಶವ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.





