ಉಡುಪಿ: ಮೀನಿನ ಲಾರಿ ಕಂಬಕ್ಕೆ ಡಿಕ್ಕಿ: ಓರ್ವ ಮೃತ್ಯು
ಉಡುಪಿ: ರಸ್ತೆಗೆ ಅಡ್ಡಲಾಗಿ ಬಂದ ವೃದ್ಧನನ್ನು ತಪ್ಪಿಸಲು ಹೋಗಿ ಮೀನಿನ ವಾಹನವೊಂದು ಕಂಬಕ್ಕೆ ಢಿಕ್ಕಿ ಹೊಡೆದು, ಚಾಲಕ ಮೃತಪಟ್ಟ ಘಟನೆ ಸಂತೆಕಟ್ಟೆಯ ಬಳಿ ಮಂಗಳವಾರ ನಡೆದಿದೆ.
ಮೃತ ಚಾಲಕನನ್ನು ತೌಫೀಕ್ (28) ಎಂದು ಗುರುತಿಸಲಾಗಿದೆ.
ಮೀನಿನ ಲಾರಿ ರಾಷ್ಟೀಯ ಹೆದ್ದಾರಿ 66 ರಲ್ಲಿ ಸಂತೆಕಟ್ಟೆಯ ಹತ್ತಿರ, ರಾತ್ರಿ 1:00 ಗಂಟೆಯ ವೇಳೆ ಹೋಗುತ್ತಿದ್ದಾಗ ರಸ್ತೆಗೆ ಅಡ್ಡಲಾಗಿ ವೃದ್ಧರೊಬ್ಬರು ಬಂದಾಗ, ವೇಗದಲ್ಲಿದ್ದ ವಾಹನ ವೃದ್ಧನನ್ನು ತಪ್ಪಿಸಲು ಹೋಗಿ ಕಂಬಕ್ಕೆ ಢಿಕ್ಕಿ ಹೊಡೆದಿದೆ.
ಪರಿಣಾಮ ಗಂಭೀರವಾಗಿ ಗಾಯಗೊಂಡ ಚಾಲಕ ಮೃತಪಟ್ಟಿದ್ದು, ಕ್ಲೀನರ್ ಸಣ್ಣಪುಟ್ಟ ಗಾಯದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.





