December 19, 2025

ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ

0
image_editor_output_image-2105327518-1725866353422.jpg

ಪಾಟ್ನಾ: ಪಾಟ್ನಾದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಬಿಜೆಪಿ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಪಾಟ್ನಾ ನಗರದ ಮಂಗಲ್ ತಲಾಬ್ ಬಳಿಯ ಮನೋಜ್ ಕಮಾಲಿಯಾ ಗೇಟ್ ಬಳಿ ಈ ಘಟನೆ ನಡೆದಿದೆ.

ಮೃತರನ್ನು ಬಿಜೆಪಿ ಮುಖಂಡ ಶ್ಯಾಮ್ ಸುಂದರ್ ಅಲಿಯಾಸ್ ಮುನ್ನಾ ಶರ್ಮಾ ಎಂದು ಗುರುತಿಸಲಾಗಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಶ್ಯಾಮ್ ಸುಂದರ್ ಮನೋಜ್ ಕಮಾಲಿಯಾ ಗೇಟ್ ಬಳಿ ಬಂದಿದ್ದಾಗ ವಾಹನದಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಶ್ಯಾಮ್ ಸುಂದರ್ ಬಿಜೆಪಿಯಿಂದ ಪಾಟ್ನಾ ಸಿಟಿ ಚೌಕ್‌ನ ಮಾಜಿ ಮುನ್ಸಿಪಲ್ ಬೋರ್ಡ್ ಅಧ್ಯಕ್ಷರಾಗಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!