September 20, 2024

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ನಾಯಕತ್ವ ತರಬೇತಿ ಶಿಬಿರ

0

ಮಂಗಳೂರು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ ಸಮಿತಿಯ ವತಿಯಿಂದ ನಾಯಕತ್ವ ಶಿಬಿರವೂ ದಕ್ಷಿಣ ವಿಧಾನ ಸಭಾ ಸಮಿತಿಯ ಅಧ್ಯಕ್ಷರಾದ ಸುಹೈಲ್ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಡಿದ ಅವರು ಪಕ್ಷ ಮುಂದೆ ಬರಲಿರುವ ಕಾರ್ಪೊರೇಷನ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಗೊಳಿಸಲು ಇಂದೇ ಕಾರ್ಯಕರ್ತರನ್ನು ಬೂತ್, ವಾರ್ಡ್ ಮಟ್ಟದಲ್ಲಿ ಸಜ್ಜುಗೊಳಿಸ ಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ನಾಯಕತ್ವ ತರಬೇತಿ ನೀಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆಯವರು ಮಾತನಾಡಿ “ಕೇರಳದ ವಯನಾಡಿನಲ್ಲಿ ಪ್ರಕ್ರತಿ ವಿಕೋಪಕ್ಕೆ ಹಲವಾರು ಮಂದಿ ಮಣ್ಣಿನಡಿಯಲ್ಲಿ ತಮ್ಮ ಜೀವ ಕಳೆದು ಕೊಂಡಾಗ ಕಾರ್ಯಕರ್ತರು ತಮ್ಮ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಮಾಡಿದ ಸೇವೆ ವಿಶ್ವವೇ ಕೊಂಡಾಡಿದೆ ನಾಯಕರ ಒಂದೇ ಒಂದು ಕರೆಗೆ ಅಪಾಯವನ್ನು ಲೆಕ್ಕಿಸದೆ ಹೋರಾಟಕ್ಕೂ,‌ ಸಾಮಾಜಿಕ ಸೇವೆಗೂ ಸದಾ ಸಿದ್ದವೆಂದು ತೋರಿಸಿ ಕೊಟ್ಟ ಕಾರ್ಯಕರ್ತರುಲ್ಲ ಪಕ್ಷವಾಗಿದೆ ಎಸ್‌ಡಿಪಿಐ ಇಲ್ಲಿ ಬಂದಂತಹ ಬೂತ್, ವಾರ್ಡ್ ನಾಯಕರು ತಮ್ಮ ತಮ್ಮ ವಾರ್ಡ್ಗಳಲ್ಲಿ ನಾಯಕತ್ವ ಗುಣವುಳ್ಳ ಕಾರ್ಯಕರ್ತರನ್ನು ಸಜ್ಜು ಗೊಳಿಸುವುದಲ್ಲದೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸದುಪಯೋಗ ಪಡಿಸಿ ಕೊಳ್ಳ ಬೇಕೆಂದು” ಕರೆ ನೀಡಿದರು.

ರಾಜ್ಯ ಸಮಿತಿ ಸದಸ್ಯರಾದ ಅತ್ತಾವುಳ್ಳ ಜೋಕಟ್ಟೆಯವ್ರು ಮಾತನಾಡಿ “ಅನ್ಯಾಯ, ಅಕ್ರಮ, ಅನೀತಿಯ ಕಾರಣಕ್ಕೆ ಸಾಮಾಜಿಕ, ರಾಜಕೀಯ ರಂಗದಲ್ಲಿ ಹೋರಾಟ ಮಾಡಿದ ಕಾರಣಕ್ಕೆ ನಮ್ಮ ಪಕ್ಷದ ಹಲವಾರು ನಾಯಕರು, ಕಾರ್ಯಕರ್ತರು ಅಕ್ರಮಾ ಬಂಧನಕ್ಕೆ ಒಳಗಾಗ್ಗಿದ್ದಾರೆ. ಆದರೂ ನಮ್ಮ ಕಾರ್ಯಕರ್ತರು ಎದೆ ಗುಂದದೇ ಇಂದು ಪಕ್ಷದ ಮುಖಾಂತರ ದಮನಿತಕೊಳಪಟ್ಟ ವರ್ಗಕ್ಕೆ ಸಾಮಾಜಿಕ ನ್ಯಾಯ ಒದಗಿಸಿ ಕೊಡಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆಂದರು”.

ಕ್ಷೇತ್ರ ಸಮಿತಿ ಕೋಶಾಧಿಕಾರಿ ಇಬ್ರಾಹಿಂ ದುಬಾಲ್, ಕ್ಷೇತ್ರ ಮಂಗಳೂರು ದಕ್ಷಿಣ ವಿಧಾನ ಸಭಾ ಬೂತ್, ವಾರ್ಡ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಕ್ಷೇತ್ರ ಉಪಾಧ್ಯಕ್ಷರಾದ ಸಿದ್ದೀಕ್ ಬೆಂಗ್ರೆ ಸ್ವಾಗತಿಸಿ, ಕ್ಷೇತ್ರ ಕಾರ್ಯದರ್ಶಿ ಅಲಿ ಅಕ್ಬರ್ ಮಿಲಾಯತ್ ಧನ್ಯವಾದಗೈದರು, ಕ್ಷೇತ್ರ ಸಮಿತಿ ಸದಸ್ಯರಾದ ಬಶೀರ್ ಬಜಾಲ್ ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!