ಬಡ್ಡಿ ಸಾಲಕ್ಕೆ ಬೇಸತ್ತು ಬೇಕರಿ ಮಾಲಕ ಆತ್ಮಹತ್ಯೆ
ಗುಬ್ಬಿ: ಪಟ್ಟಣದ ಹೊರವಲಯದ ಸಿಐಟಿ ಕಾಲೇಜು ಮುಂಭಾಗದ ಬೇಕರಿಯಲ್ಲಿ ಗುರುವಾರ ರಾತ್ರಿ ಬೇಕರಿ ಮಾಲೀಕ ರಾಜು (45) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಟ್ಟಣದ ಬಡ್ಡಿ ನಾಗ ಎಂಬುವರಿಂದ ಪಡೆದಿದ್ದ ಸಾಲ ಹಿಂದಿರುಗಿಸಿದ್ದರೂ, ಚೆಕ್ ವಾಪಸ್ ನೀಡದೆ ಮತ್ತಷ್ಟು ಹಣಕ್ಕಾಗಿ ಪೀಡಿಸಿ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ’ ಎಂದು ರಾಜು ಹೇಳಿರುವ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
ಗುಬ್ಬಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.





