ವಿಟ್ಲ ರೋಟರಿ ಕ್ಲಬ್ ವತಿಯಿಂದ ಶಿಕ್ಷಕರಿಗೆ ಸನ್ಮಾನ
ವಿಟ್ಲ: ವಿಟ್ಲ ರೋಟರಿ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಗೆ ಸನ್ಮಾನ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ PDG Rtn ರಂಗನಾಥ್ ಭಟ್ Assistant Governor PHF Rtn ಜಯರಾಮ ರೈ ಭಾಗವಹಿಸಿ, ಶಿಕ್ಷಕರನ್ನು ಸನ್ಮಾನಿಸಿದರು.
ಸಭಾ ವೇದಿಕೆಯಲ್ಲಿ ರೋಟರಿ ಜಿಲ್ಲಾ ನಿರ್ದೇಶಕರಾದ Rtn ಡಾ. ವಿ. ಕೆ ಹೆಗ್ಡೆ, ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶ್ರೀಧರ ಶೆಟ್ಟಿ ಕಾರ್ಯದರ್ಶಿಗಳಾದ, ಮೋಹನ ಎ, ಸದಸ್ಯರಾದ, ಹಸನ್ ವಿಟ್ಲ, ಪ್ರಾಂಶುಪಾಲರಾದ ಜಯರಾಮ ರೈ ಆಡಳಿತಾಧಿಕಾರಿಗಳಾದ ರಾಧಾಕೃಷ್ಣ ಎ, ರೋಟರಿ ಕ್ಲಬ್ ವಿಟ್ಲದ ನಿಕಟ ಪೂರ್ವ ಅಧ್ಯಕ್ಷರಾದ Rtn ಕಿರಣ್ ಕುಮಾರ್ ವೇದಿಕೆಯಲ್ಲಿದ್ದರು.
ಸುಮಾರು 45 ಜನ ಶಿಕ್ಷಕರನ್ನು ಮತ್ತು 19 ಜನ ಸಿಬ್ಬಂದಿಗಳನ್ನು ಗೌರವಿಸಲಾಯಿತು. ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷರಾದ ಹರೀಶ್ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ Rtn ಸೋಮಶೇಖರ್ ವಂದಿಸಿದರು. Rtn ಪ್ರಕಾಶ್ ನಾಯಕ್ ಶಿಕ್ಷಕರ ಹೆಸರನ್ನು ಉಲ್ಲೇಖಿಸಿದರು. Rtn ರಮೇಶ್ ಬಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ವಿಟ್ಲ ಇದರ ಪೂರ್ವಾಧ್ಯಕ್ಷರುಗಳಾದ Rtn ವಸಂತ ಶೆಟ್ಟಿ, Rtn ಅಣ್ಣಪ್ಪ ಸಾಸ್ತಾನ, Rtn ಡಾ. ಚರಣ್ ಕಜೆ, Rtn ಸಂಜೀವ ಪೂಜಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು.





