ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ
ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಪಕ್ಷದ ಗಣ್ಯರ ಸಮಕ್ಷಮದಲ್ಲಿ ಗುರುವಾರ ನಡೆಯಿತು. ಅಧ್ಯಕ್ಷರಾಗಿ ಕರುಣಾಕರ ನಾಯ್ತೋಟ್ಟು ಹಾಗೂ ಉಪಾಧ್ಯಕ್ಷರಾಗಿ ಸಂಗೀತ ಪಾಣೆಮಜಲು ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಣಿ ಉಪಾಧ್ಯಕ್ಷ ಆರ್.ಸಿ ನಾರಾಯಣ, ಹಿರಿಯರಾದ ಜಗನ್ನಾಥ ಕಾಸರಗೋಡು, ಹೆಚ್.ಜಗನ್ನಾಥ ಸಾಲ್ಯಾನ್, ಕೃಷ್ಣಯ್ಯ ವಿಟ್ಲ, ಧರ್ಮಾವತಿ ಗೌಡ, ಉಷಾ ಕೃಷ್ಣಪ್ಪ, ಬಿಜೆಪಿ ಮುಖಂಡರಾದ ಅರುಣ್ ವಿಟ್ಲ, ಉದಯ ಅಲಂಗಾರು, ರಾಜೇಶ್ ಕುಮಾರ್ ಬಾಳೆಕಲ್ಲು, ವಿಟ್ಲ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಮಾಡತ್ತಾರು, ವಿಟ್ಲ ವಿಎಸ್ ಎಸ್ ಸಂಘದ ಅಧ್ಯಕ್ಷ ನರಸಪ್ಪ ಪೂಜಾರಿ, ಬ್ರಹ್ಮ ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಬಿಜೆಪಿ ಬೆಂಬಲಿತ ಪಟ್ಟಣ ಪಂಚಾಯತ್ ಸದಸ್ಯರು, ಮಾಜಿ ಸದಸ್ಯರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.





