ಎಟಿಎಂ ಗೆ ಹಣ ತುಂಬಿಸಲು ತಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆಗೈದ ಪ್ರಕರಣ: ತಮಿಳು ಮೂಲದ ಆರೋಪಿಯ ಬಂಧನ
ಕಾಸರಗೋಡು: ಎಟಿಎಂ ಗೆ ಹಣ ತುಂಬಿಸಲು ತಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆಗೈದ ಪ್ರಕರಣಗಳಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ತಿರುಟ್ಟಿ ಗ್ರಾಮದ ಮುತ್ತು ಕುಮಾರನ್(47) ಬಂಧಿತ ಆರೋಪಿ. ಮೇ 27 ರಂದು ಘಟನೆ ನಡೆದಿತ್ತು. ಉಪ್ಪಳದ ಎಕ್ಸಿಸ್ ಬ್ಯಾಂಕ್ ನ ಎಟಿಎಂ ಗೆ ಹಣ ತುಂಬಿಸಲು ಬಂದಿದ್ದ ಸಂದರ್ಭದಲ್ಲಿ ವ್ಯಾನ್ ನಿಂದ ಹಣ ದರೋಡೆ ಮಾಡಲಾಗಿತ್ತು.
ಮೇ 27 ರಂದು ಹಾಡ ಹಗಲೇ ಘಟನೆ ನಡೆದಿತ್ತು. ವಿಶೇಷ ಪೊಲೀಸ್ ತಂಡ ತಿರುಚ್ಚಿರಾಪಳ್ಳಿ ಯಿಂದ ಆರೋಪಿಯನ್ನು ಬಂಧಿಸಿದರು. ಮೂವರ ತಂಡ ಕೃತ್ಯ ನಡೆಸಿತ್ತು.





