November 21, 2024

ಶಾಪಿಂಗ್ ವೇಳೆ ಕುಸಿದು ಬಿದ್ದ ಸದಾನಂದ ಗೌಡರ ಪತ್ನಿ: ಆಸ್ಪತ್ರೆಗೆ ದಾಖಲು

0

ಬೆಂಗಳೂರು: ಶಾಪಿಂಗ್ಗೆ ಬಂದಿದ್ದ ವೇಳೆ ಸದಾನಂದ ಗೌಡ ಪತ್ನಿ ಕುಸಿದು ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ನಾಗಸಂದ್ರ ಮೆಟ್ರೋ ಬಳಿಯ ಐಕಿಯಾ ಮಾಲ್ ಡಾಟಿ ಅವರು ಶಾಪಿಂಗ್ ಗೆ ಬಂದಿದ್ದರು. ಈ ವೇಳೆ ಹಠಾತ್ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಡಾಟಿ ಸದಾನಂದಗೌಡ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತ ಕಾರು ಚಾಲಕ, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಇದೀಗ ವಿಷಯ ತಿಳಿದು ಪತ್ನಿ ನೋಡಲು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿವಿ ಸದಾನಂದಗೌಡ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!