November 8, 2026

ಸುರತ್ಕಲ್ ಲೈಟ್ ಹೌಸ್, ಎನ್‌ಐಟಿಕೆ ಸಂಪರ್ಕಿಸುವ ಮುಖ್ಯ ರಸ್ತೆ ಕುಸಿತ

0
image_editor_output_image-185038868-1725136975489.jpg

ಸುರತ್ಕಲ್ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸುರತ್ಕಲ್ ಲೈಟ್ ಹೌಸ್ ಮತ್ತು ಎನ್‌ಐಟಿಕೆ ಸಂಪರ್ಕಿಸುವ ಮುಖ್ಯ ರಸ್ತೆ ಕುಸಿದಿದ್ದು ಘಟನಾ ಸ್ಥಳಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ರಸ್ತೆ ಬಿರುಕು ಬಿಟ್ಟ ಸ್ಥಿತಿಯಲ್ಲಿತ್ತು. ಶನಿವಾರ ರಸ್ತೆಯ ಅಡಿಭಾಗ ಕುಸಿದು ಡಾಮರು ರಸ್ತೆಯೂ ಅಪಾಯದಲ್ಲಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಬ್ಯಾರಿಕೇಟ್ ಅಳವಡಿಸಿದ್ದಾರೆ. ಹೆಚ್ಚಿನ ಹಾನಿಯಾಗದಂತೆ ಮರಳು ಚೀಲವಿಟ್ಟು ಸುರಕ್ಷತೆ ಒದಗಿಸಲು ಶಾಸಕರು ಸೂಚಿಸಿದರಲ್ಲದೆ, ರಸ್ತೆಯ ನಿರ್ಮಾಣಕ್ಕೂ ಪೂರಕ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು. ಮನಪಾ ಸದಸ್ಯರಾದ ಶ್ವೇತ ಪೂಜಾರಿ, ಶೋಭಾ ರಾಜೇಶ್, ಬಿಜೆಪಿ ಪ್ರಮುಖರಾದ ದಿನಕರ್ ಇಡ್ಯಾ, ರಾಜೇಶ್ ಮುಕ್ಕ, ರಾಘವೇಂದ್ರ ಶೆಣೈ ಮತ್ತಿತರರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!