ಚಾರ್ಮಾಡಿ ಘಾಟಿಯ 8, 9ನೇ ತಿರುವಿನಲ್ಲಿ ಗುಡ್ಡ, ಬಂಡೆಗಳು ಕುಸಿತ
ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದ್ದು ಇಂದು ಮತ್ತೆ ಗುಡ್ಡ ಕುಸಿದಿದೆ.
ಘಾಟಿಯ 8 ಮತ್ತು 9ನೇ ತಿರುವಿನಲ್ಲಿ ಗುಡ್ಡ ಮತ್ತು ಬಂಡೆಗಳು ಕುಸಿದಿದೆ. ಮಳೆ ನೀರಿನ ಜೊತೆ ರಸ್ತೆಗೆ ಕಲ್ಲುಗಳು ತೇಲಿಕೊಂಡು ಬಂದಿವೆ. ಚಾರ್ಮಾಡಿ ಘಾಟಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಾಹನ ಸಂಚಾರ ಎಂದಿನಂತೆ ಇದ್ದು ಯಾವುದೇ ತೊಂದರೆ ಇಲ್ಲ. ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಯಾಗುತ್ತಿದ್ದು ರಸ್ತೆಯಲ್ಲಿ ಅಡಿಗಟ್ಟಲೇ ನೀರು ಹರಿಯುತ್ತಿದೆ.




