ವಿಟ್ಲ: ಬಸ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಮೃತ್ಯು
ವಿಟ್ಲ: ದ್ವಿಚಕ್ರ ವಾಹನ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಆಗಸ್ಟ್ 12 ಮಂಗಳವಾರ ವಿಟ್ಲ-ಸಾಲೆತ್ತೂರು-ಮುಡಿಪು ರಸ್ತೆಯ ಕಟ್ಟತ್ತಿಲ ಎಂಬಲ್ಲಿ ನಡೆದಿದ್ದು, ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ದ್ವಿಚಕ್ರ ವಾಹನಕ್ಕೆ ಹಾನಿಯಾಗಿದ್ದು, ಸವಾರ ಸ್ಥಳೀಯ ನಿವಾಸಿ ಮುಝಂಬಿಲ್ ಗಂಭೀರ ಗಾಯಗೊಂಡಿದ್ದು, ಯುವಕನನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ವಿಟ್ಲದಿಂದ ಮುಡಿಪು ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಮೆದು ಕಡೆ ತೆರಳುತ್ತಿದ್ದ ಆಕ್ಟಿವಾ ನಡುವೆ ಅಪಘಾತ ಸಂಭವಿಸಿದೆ.




