February 2, 2026

ಸಮೋಸಾ ತಿಂದು ಮೂವರು ವಿದ್ಯಾರ್ಥಿಗಳು ಮೃತ್ಯು: 24 ವಿದ್ಯಾರ್ಥಿಗಳು ಅಸ್ವಸ್ಥ

0
image_editor_output_image-891847867-1724217306962.jpg

ಆಂಧ್ರಪ್ರದೇಶ: ಸಮೋಸಾ ತಿಂದು ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು 24 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿರುವ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಕೈಲಾಸಪಟ್ಟಣದ ಅನಾಥಾಶ್ರಮದಲ್ಲಿ ಈ ಘಟನೆ ನಡೆದಿದೆ.

ಕೈಲಾಸಪಟ್ಟಣದ ಅನಾಥಾಶ್ರಮದಲ್ಲಿ ಎಂದಿನಂತೆ ಮಕ್ಕಳಿಗೆ ತಿಂಡಿಯನ್ನು ನೀಡಲಾಗಿದ್ದು, ತಿಂಡಿ ಜೊತೆ ಸಮೋಸಾಗಳನ್ನು ನೀಡಲಾಗಿದೆ. ಆದರೆ ಸಮೋಸಾ ತಿಂದ ವಿದ್ಯಾರ್ಥಿಗಳಲ್ಲಿ ಕೆಲವೇ ಗಂಟೆಗಳಲ್ಲಿ ಫುಡ್ ಪಾಯಿಸನ್ನಿಂದ ವಾಂತಿಯಾಗಲು ಪ್ರಾರಂಭಿಸಿ ತೀವ್ರ ಅಸ್ವಸ್ಥರಾಗಿದ್ದಾರೆ.

ಒಟ್ಟು 27 ವಿದ್ಯಾರ್ಥಿಗಳು ಅಸ್ವಸ್ಥರಾದ ಕಾರಣ ತಕ್ಷಣ ಅವರನ್ನು ನರಸೀಪಟ್ಟಣಂ, ಅನಕಪಲ್ಲಿ ಹಾಗೂ ವಿಶಾಖಪಟ್ಟಣಂನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸಮೋಸಾ ವಿಷಕಾರಿಯಾಗಿದ್ದರಿಂದ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!