July 13, 2026

ಸ್ಲೀಪರ್ ಕೋಚ್ ಬಸ್, ಲಾರಿ ನಡುವೆ ಅಪಘಾತ: ಬಸ್ಸಿನಲ್ಲಿದ್ದ ಓರ್ವ ಪ್ರಯಾಣಿಕ ಮೃತ್ಯು, 6 ಪ್ರಯಾಣಿಕರಿಗೆ ಗಾಯ

0
image_editor_output_image724446707-1724135300138.jpg

ಕುಷ್ಟಗಿ: ಕುಷ್ಟಗಿ ತಾಲೂಕಿನ ಕುರಬನಾಳ ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಸ್ಲೀಪರ್ ಕೋಚ್ ಬಸ್, ಚಲಿಸುವ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟು, 6 ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.

ತಮಿಳುನಾಡು ಮೂಲದ ನಟೇಶನ್ ಮೃತ ದುರ್ದೈವಿ.ಕುಷ್ಟಗಿ-ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕುರಬನಾಳ ಸಮೀಪ ಬೆಂಗಳೂರಿನಿಂದ ಗೋವಕ್ಕೆ ಹೊರಟಿದ್ದ ಬಸ್ಸು, ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಸ್ಲೀಪರ್ ಕೋಚ್ ಬಸ್ ಚಾಲಕನ ಓವರ್ ಸ್ಪೀಡ್ ಹಾಗೂ ನಿದ್ದೆಯ ಮಂಪರಿನಲ್ಲಿ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದಿರುವುದೇ ಕಾರಣ ಎನ್ನಲಾಗುತ್ತಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಎಡ ಭಾಗದ ಮುಂಭಾಗ ಭಾಗಶಃ ನಜ್ಜು ಗುಜ್ಜಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!