ಹುಸಜ್ಜಾ- ಫಾತಿಮ ಪ್ಯಾಮಿಲಿ ಗ್ರೂಪ್ ವಿಟ್ಲ ಇದರ ಫ್ಯಾಮಿಲಿ ಮೀಟ್ ಮತ್ತು ವಿದ್ಯಾರ್ಥಿವೇತನ ವಿತರಣೆ
ವಿಟ್ಲ: ಹುಸಜ್ಜಾ- ಫಾತಿಮ ಪ್ಯಾಮಿಲಿ ಗ್ರೂಪ್ ವಿಟ್ಲ ಇದರ ಫ್ಯಾಮಿಲಿ ಮೀಟ್ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಜರುಗಿತು. ಹಮೀದ್ ಪೈವಳಿಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜನಾಬ್ ಹಾಜಿ ಅಬ್ದುಲ್ ಹಮೀದ್ ಮಚ್ಚಂಪಾಡಿ, ಮಚ್ಚಂಪಾಡಿ ಪಂಚಾಯಿತ್ ಮಾಜಿ ಅಧ್ಯಕ್ಷರು, ಕೆ.ಅಬೂಬಕರ್ ವಕೀಲರು ಮತ್ತು ನೋಟರಿ ವಿಟ್ಲ, ಅಬ್ದುಲ್ ಖಾದರ್ ಹಾಜಿ ಪಾಪಿಲ, ಇದ್ದಿ ಕುಂಞಿ ಹಾಜಿ ಸಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸಮಾರಂಭದಲ್ಲಿ ಆಯ್ದ 30 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯ್ತು. ಮಂಗಳೂರಿನ ರಫೀಕ್ ಮಾಸ್ಟರ್ ಮೋಟಿವೇಶನ್ ಕ್ಲಾಸ್ ನೀಡಿದರು. ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ ಅಬ್ದುಲ್ ಆಜೀಮ್ ರವರನ್ನು ಸನ್ಮಾನಿಸಲಾಯಿತು.
ಹುಸ್ಸಜಾ- ಫಾತಿಮ ಪ್ಯಾಮಿಲಿ ಗ್ರೂಪ್ ಇದರ ನಿರ್ದೇಶಕ ಕೆ. ಅಬೂಬಕರ್ ನೋಟರಿ ಮಾತನಾಡಿ ಇನ್ನು ಮುಂದೆ ಈ ಗ್ರೂಪ್ ಚಾರಿಟೇಬಲ್ ಟ್ರಸ್ಟ್ ಆಗಿ ಪರಿವರ್ತನೆಗೊಳ್ಳಲಿದೆ ಎಂದರು.
ಅಬ್ದುಲ್ ಬಶೀರ್ ಬದಿಯಾರ್ ಮತ್ತು ಶರೀಫ್ ಸಾಜ ಕಾರ್ಯಕ್ರಮ ನಿರ್ವಹಿಸಿದರು. ಮೈಮೂದ್ ಬಳ್ಳೂರು ಕಿರಾಅತ್ ಪಠಿಸಿದರು. ಹಮೀದ್ ಲತೀಫ್ ಬೋಳಂತೂರು ದುವಾ ಮಾಡಿದರು.
ರಾಜ್ಯ ವಾಲಿಬಾಲ್ ತರಬೇತಿದಾರ ಅಬ್ದುಲ್ ಹಮೀದ್ ಸಾಜ, ಹಸನ್ ಸಿಟಿ ಬಜಾರ್ ಪುತ್ತೂರು, ಆದ್ರಾಮ ನೆಲ್ಲಿಗುಡ್ಡೆ, ಇಸ್ಮಾಯಿಲ್ ಕಾನತಡ್ಕ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ, ಮಹಮ್ಮದ್ ಕುಂಞಿ ಪಾಣೆಮಂಗಳೂರು, ಹಸನ್ ಪರ್ಲಡ್ಕ, ಶಂಶು ಹಾಜಿ ಪರ್ಲಡ್ಕ, ಇಬ್ರಾಹಿಂ ಮಂಡ್ಯೂರ್, ಕನ್ಯಾನ ಗ್ರಾಮ ಪಂಚಾಯತಿ ಸದಸ್ಯ ಮೊಯ್ದುಕುಂಜಿ, ಆದ್ರಾಮ ಕಡಂಬು , ಬಾಸಿತ್ ಹಾಜಿ ಬೊಳ್ನಾರ್,ಮೆಹಬೂಬ್ ಮಾದಕಟ್ಟೆ, ಇಸ್ಮಾಯಿಲ್ ಸೌತ್ ಇಂಡಿಯಾ ಮುಂತಾದವರು ಉಪಸ್ಥಿತರಿದ್ದರು.
ಅಬೂಬಕರ್ ಸಮಡ್ಕ ಕಾರ್ಯಕ್ರಮದ ಪ್ರಯೋಜಕತ್ವ ವಹಿಸಿದ್ದರು.




