ಫಾರ್ಚುನರ್ ಕಾರು ಢಿಕ್ಕಿ: ಪಾರ್ಕ್ ಮಾಡಲಾಗಿದ್ದ 17 ಬೈಕ್‌ಗಳು ಜಖಂ
ಹಾಸನ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಾರ್ಕ್ ಮಾಡಲಾಗಿದ್ದ 17 ಬೈಕ್‌ಗಳಿಗೆ ಗುದ್ದಿರುವ ಘಟನೆ ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿ, ಕೆಂಕೆರೆಹಳ್ಳಿ ಗೇಟ್ ಬಳಿ ನಡೆದಿದೆ.
ಜೋರಾಗಿ ಮಳೆ ಸುರಿಯುತ್ತಿದ್ದರಿಂದ ಬಸ್ ನಿಲ್ದಾಣದ ಬಳಿ ಬೈಕ್‌ಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ವೇಗವಾಗಿ ಬಂದ ಫಾರ್ಚುನರ್ ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣದ ಗೋಡೆಗೆ ಬಡಿದು, ಬಳಿಕ ಸಾಲಾಗಿ ನಿಲ್ಲಿಸಿದ್ದ ಬೈಕ್‌ಗಳಿಗೆ ಗುದ್ದಿದೆ. ಘಟನೆಯಿಂದ ಓರ್ವನಿಗೆ ಗಾಯಗಳುಂಟಾಗಿದ್ದು, ಬಸ್ ನಿಲ್ದಾಣದ ಬಳಿ ನಿಂತಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೈಕ್‌ಗಳು ರಸ್ತೆಗೆಸಯಲ್ಪಟ್ಟಿದ್ದು ಹಲವು ಬೈಕ್‌ಗಳು ನಜ್ಜುಗುಜ್ಜಾಗಿದೆ.




