ವಿಟ್ಲ: ಆಟೋ ಚಾಲಕನಿಗೆ ಚೂರಿ ಇರಿತ: ಆರೋಪಿ ಪೊಲೀಸ್ ವಶಕ್ಕೆ
ವಿಟ್ಲ: ಸಾರ್ವಜನಿಕರ ಎದುರಲ್ಲೇ ಚೂರಿ ಇರಿದ ಘಟನೆ ಉರಿಮಜಲು ಜಂಕ್ಷನ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಎಂಎಂಎಸ್ ಆಟೋ ಚಾಲಕ ಶರೀಫ್ ಎಂಬವನಿಗೆ ಇಡ್ಕಿದು ಪಂಚಾಯತ್‌ನ ಎದುರಲ್ಲಿ ಕಾರ್ಯಡಿ ನಿವಾಸಿ ರಾವೂಫ್ ಎಂಬವರ ಪುತ್ರ ಆಪೀ ಎಂಬವನು ಚೂರಿ ಇರಿದಿದ್ದಾನೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಗಂಭೀರ ಗಾಯಗೊಂಡ ಶರೀಫ್‌ನನ್ನು ಸ್ಥಳಿಯರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.




