February 2, 2026

ಕಾಸರಗೋಡು: ವಿದ್ಯುತ್ ಶಾಕ್: ಮುಳ್ಳೇರಿಯಾ ಇನ್ಸೆಂಟ್ ಜೀಸಸ್ ಚರ್ಚ್ ನ ಧರ್ಮಗುರು ಮೃತ್ಯು

0
image_editor_output_image-1435459595-1723781923655.jpg

ಕಾಸರಗೋಡು: ವಿದ್ಯುತ್ ಶಾಕ್ ತಗುಲಿ ಮುಳ್ಳೇರಿಯಾ ಇನ್ಸೆಂಟ್ ಜೀಸಸ್ ಚರ್ಚ್ ನ ಧರ್ಮಗುರು ಫಾ. ಮ್ಯಾಥ್ಯ ಶಿನ್ಸ್ ಕುಡಿಲಿಲ್ ( 30) ಮೃತಪಟ್ಟ ಘಟನೆ ಗುರುವಾರ ಸಂಜೆ ಮುಳ್ಳೇರಿಯ ದಲ್ಲಿ ನಡೆದಿದೆ.

ಇವರು ಮೂಲತಃ ಕಣ್ಣೂರು ಇರಿಟ್ಟಿ ನಿವಾಸಿಯಾಗಿದ್ದರು. ಜೊತೆಗಿದ್ದ ಧರ್ಮಗುರು ಫಾ. ಸೆಬಿನ್ ಜೋಸೆಫ್ ( 29) ಗಾಯಗೊಂಡಿದ್ದಾರೆ.

ದೇಲಂಪಾಡಿ ಸಂತ ಮೇರಿಸ್ ಚರ್ಚ್ ಧರ್ಮಗುರು ಆಗಿದ್ದ ಫಾ. ಮ್ಯಾಥ್ಯ ಅವರು, ಗುರುವಾರ ಸಂಜೆ ಮುಳ್ಳೇರಿಯಾ ಚರ್ಚ್ ನಲ್ಲಿ ರಾಷ್ಟ್ರ ಧ್ವಜ ಅವರೋಹಣ ನಡೆಸುತ್ತಿದ್ದಾಗ ಧ್ವಜ ಅಳವಡಿಸಿದ್ದ ಕಬ್ಬಿಣದ ಪೈಪ್‌ ಸಮೀಪದ ಹೈಟೆನ್ನನ್ ಲೈನ್ ಗೆ ತಗಲಿದೆ.

Leave a Reply

Your email address will not be published. Required fields are marked *

error: Content is protected !!