ವಿದ್ಯುತ್ ಶಾಕ್: ಇಂಜಿನಿಯರ್ ಸಾವು
ಆನೇಕಲ್: ವಿದ್ಯುತ್ ಶಾಕ್‍ನಿಂದ ಯುವ ಇಂಜಿನಿಯರ್ ಸಾವಿಗೀಡಾದ ಘಟನೆ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಯಸ್ಕಾವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬೆಂಗಳೂರಿನ ನಿವಾಸಿ ಕೌಶಿಕ್ (27) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಪ್ಯಾನಲ್ ಬೋರ್ಡ್ ತಯಾರು ಮಾಡಬೇಕಾದರೆ ವಿದ್ಯುತ್ ತಗಲಿದೆ. ಕೂಡಲೆ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಅವರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.




