December 22, 2025

ಎಸ್ ಡಿ ಪಿ ಐ ಪಾಂಡವರಕಲ್ಲು ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ಧ್ವಜಾರೋಹಣ

0
IMG-20240815-WA0015.jpg

ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ 78ನೇ ಸ್ವಾತಂತ್ರ್ಯ ದಿನದ ಭಾಗವಾಗಿ ಧ್ವಜಾಹೋಹಣ ಕಾರ್ಯಕ್ರಮವು ಪಾಂಡವರಕಲ್ಲಿನ‌ ಕೊಮಿನಡ್ಕದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಎಸ್ ಡಿ ಪಿ ಐ ಸರಪಾಡಿ ಬ್ಲಾಕ್ ಇದರ ಜೊತೆ ಕಾರ್ಯದರ್ಶಿ ಮಹಮ್ಮದ್ ಶಾಕಿರ್ ಮಾತನಾಡಿ “ದೇಶವು ಬ್ರಿಟಿಷರ ಕಪಿಮುಷ್ಟಿಯಿಂದ ಸ್ವಾತಂತ್ರ್ಯಗೊಂಡ ಹಾಗೆ ಇಲ್ಲಿರುವ ಕೆಲವು ಕೋಮುವಾದಿ ದುಷ್ಟಶಕ್ತಿಗಳ ವಿರುದ್ಧ ಇನ್ನೂ ಭಾರತ ಸ್ವಾತಂತ್ರ್ಯಗೊಳ್ಳ ಬೇಕಾಗಿದೆ” ಎಂಬ ಸಂದೇಶವನ್ನು ನೀಡಿದರು.

ಕಾರ್ಯಕ್ರಮದ ಮುಖ್ಯ ಮಾತುಗಳನ್ನಾಡಿದ ಬಡಗ‌ ಕಜೆಕಾರು ಗ್ರಾಮ ಪಂಚಾಯತ್ ಇದರ‌ ಸದಸ್ಯರಾದ ಅತಾವುಲ್ಲಾ, “ದೇಶದ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಲ್ಲಿರುವ ನೈಜ ಭಾರತೀಯರು ಪಕ್ಷ,‌ ಜಾತಿ, ಆಶಯ ಎಲ್ಲವನ್ನು ಬದಿಗಿಟ್ಟು ಸನ್ನದ್ಧರಾಗಬೇಕು” ಎಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸಂದೇಶ ಭಾಷಣವನ್ನು ಮಾಡಿದ ಹಾಫಿಳ್ ಮುಸ್ತಫ ಉಸ್ತಾದ್ ಭಾರತ ದೇಶಕ್ಕೆ ಮುಸಲ್ಮಾನರ ಕೊಡುಗೆಯ ಬಗ್ಗೆ ಸವಿಸ್ತಾರ ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ SDPI ಸರಪಾಡಿ ಬ್ಲಾಕ್ ಕೋಶಾಧಿಕಾರಿಯಾದ ಮಹಮ್ಮದ್ ಹನೀಫ್, SSF ಪಾಂಡವರಕಲ್ಲು ಶಾಖೆಯ ಅಧ್ಯಕ್ಷರಾದ ಸಂಶುದ್ದೀನ್ ಪಾದೆ, NIWA ಗಲ್ಫ್ ಕಮಿಟಿ ಪಾಂಡವರಕಲ್ಲು ಇದರ ಮಾಜಿ ಅಧ್ಯಕ್ಷರಾದ ಆದಂ ಬೊಟ್ಟು, NIYA ಪಾಂಡವರಕಲ್ಲು ಇದರ ಅಧ್ಯಕ್ಷರಾದ ರಝಾಕ್ ಚಾನ್ಸ್, NIYA ಪಾಂಡವರಕಲ್ಲು ಇದರ ಮಾಜಿ ಅಧ್ಯಕ್ಷರಾದ ಮುರ್ಶಿದ್ ಕುದುರು ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು SDPI ಪಾಂಡವರಕಲ್ಲು ಬ್ರಾಂಚ್ ಕಾರ್ಯದರ್ಶಿ ಇಮ್ರಾನ್ ಸ್ವಾಗತಿಸಿ, ನಿರೂಪಿಸಿ, ಧನ್ಯವಾದಗೈದರು.

Leave a Reply

Your email address will not be published. Required fields are marked *

You may have missed

error: Content is protected !!