ಕೊಡಂಗಾಯಿ: ದ.ಕ.ಜಿ.ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಬ್ಯಾಂಡ್ ಸೆಟ್ ಹಸ್ತಾಂತರ
ವಿಟ್ಲ: ದಿನಾಂಕ 12 ಆಗಸ್ಟ್ 2024 ರಂದು ಕೊಡಂಗಾಯಿ ದ.ಕ.ಜಿ.ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಯಂತ್ ಪೂರ್ಲಪ್ಪಾಡಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಶ್ರೀಶೈಲ ಡೋಣೂರ ಇವರ ಸಮ್ಮುಖದಲ್ಲಿ ಹಳೆವಿಧ್ಯಾರ್ಥಿ ಸಂಘದ ವತಿಯಿಂದ ನೂತನವಾದ ಬ್ಯಾಂಡ್ ಸೆಟ್ ಅನ್ನು ಹಸ್ತಾಂತರಿಸಲಾಯಿತು.
ನಂತರ ಪಂಚಾಯತ್ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ ಮಜೀದ್ ಟಿ ಎಂಕೊಡಂಗಾಯಿ, ಪ್ರಧಾನ ಕಾರ್ಯದರ್ಶಿಗಳಾದ ರಾಮಕೃಷ್ಣ ಕಾರಂತ ಹಾಗೂ ಸದಸ್ಯರಾದ ನೌಶಾದ್ ಕತಾರ್, ಸಮದ್ ಧುಬೈ ಉಪಸ್ಥಿತಿತರಿದ್ದರು. ಮುಖ್ಯ ಶಿಕ್ಷಕಿ ಲೋಲಾಕ್ಷಿ ಇವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.ಶಿಕ್ಷಕಿ ವಾಣಿಶ್ರೀ ಅವರು ಧನ್ಯವಾದಾರ್ಪಣೆಗೈದರು.





