ಸುಳ್ಯ: ಬಸ್ ನ ಮಾಲಕ ನೇಣುಬಿಗಿದು ಆತ್ಮಹತ್ಯೆ
ಸುಳ್ಯ: ಹಲವಾರು ವರ್ಷಗಳಿಂದ ಸುಳ್ಯದ ಗ್ರಾಮೀಣ ಭಾಗಗಳಲ್ಲಿ ಬಸ್ಸು ವ್ಯವಸ್ಥೆಯನ್ನು ನೀಡಿ ಸರ್ವರಿಗೂ ಪ್ರೀತಿಪಾತ್ರರಾದ ಅವಿನಾಶ್ ಬಸ್ ನ ಮಾಲಕ ನಾರಾಯಣ ರೈ ಯವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಅವರು ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸುಳ್ಯದ ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯ ಇಲ್ಲದಂತಹ ಸಂದರ್ಭದಲ್ಲಿ ನಾರಾಯಣ ರೈಯವರು ಬಸ್ ಸೇವೆಯನ್ನು ಆರಂಭಿಸಿ ಗ್ರಾಮೀಣ ಭಾಗದಲ್ಲಿ ಬಸ್ ಓಡಾಡುವಂತೆ ಮಾಡಿದ್ದರು.
ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.





