ಮಂಗಳೂರು: ತುಳು ನಾಟಕ ರಂಗದ ಬರಹಗಾರ ಅಶೋಕ್ ಶೆಟ್ಟಿ ನಿಧನ
ಮಂಗಳೂರು: ಖ್ಯಾತ ಕಲಾವಿದ, ತುಳು ನಾಟಕ ರಂಗದ ಬರಹಗಾರ, ಸೂಪರ್ ಹಿಟ್ ತುಳು ನಾಟಕ ಒರಿಯರ್ದೊರಿ ಅಸಲ್‌ನಲ್ಲಿ ತೆಂಗಿನಕಾಯಿ ಕೀಳುವ ನಾಥು ಪಾತ್ರದ ಮೂಲಕ ಹೆಸರುವಾಸಿಯಾಗಿದ್ದ ಅಶೋಕ್ ಶೆಟ್ಟಿ ಅಂಬ್ಲಿಮೊಗರು(53) ಸೋಮವಾರ ನಿಧನರಾದರು.
ಅಶೋಕ್ ಸೋಮವಾರ ಬೆಳಗ್ಗೆ ಅಂಬ್ಲಿಮೊಗರುವಿನ ತಮ್ಮ ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.





