ವಿಟ್ಲ: ಟೌನ್ ಮಸೀದಿಯ ಸಮಾಲೋಚನಾ ಸಭೆ
ವಿಟ್ಲ: ಇಲ್ಲಿನ ಪುತ್ತೂರು ರಸ್ತೆಯಲ್ಲಿರುವ ಅಲ್- ಆಶ್‌ಅರಿಯ್ಯ ಟೌನ್ ಮಸೀದಿಯ ಸಮಾಲೋಚನಾ ಸಭೆಯು ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಬ್ರೈಟ್ ಅವರ ಅಧ್ಯಕ್ಷತೆಯಲ್ಲಿ ಸ್ಪೈಸಿ ಹೊಟೇಲ್ ನ ಸಭಾಂಗಣದಲ್ಲಿ ನಡೆಯಿತು.
ಟ್ರಸ್ಟ್ ನಿರ್ದೇಶಕ ಶೈಖುನಾ ವಾಲೆಮುಂಡೋವು ಮಹಮೂದುಲ್ ಫೈಝಿ ಉಸ್ತಾದ್ ದುವಾ ನೆರವೇರಸಿದರು.ಇನ್ನೋರ್ವ ನಿರ್ದೇಶಕ ಇಬ್ರಾಹಿಂ ಫೈಝಿ ಕನ್ಯಾನ ಉದ್ಘಾಟಿಸಿದರು.
ಉಪಾಧ್ಯಕ್ಷ ಸಿ.ಎಚ್.ಮಹಮಾದಾಲಿ ಸಖಾಫಿ ಸುರಿಬೈಲು ವಿಷಯ ಮಂಡಿಸಿದರು.
ನಿರ್ವಹಣಾ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಶಾಫಿ ,ಉಪಾಧ್ಯಕ್ಷರಾದ ಹಕೀಂ ಕಂಬಳಬೆಟ್ಟು ಹಾಗೂ ತೌಸೀಫ್ ಎಂ.ಜಿ,ಕಾರ್ಯದರ್ಶಿ ಉಬೈದ್ ವಿಟ್ಲ ಬಝಾರ್ , ಜೊತೆ ಕಾರ್ಯದರ್ಶಿ ಶಮೀರ್ ,ಕೋಶಾಧಿಕಾರಿ ಇಕ್ಬಾಲ್ ಶೀತಲ್, ಮಾಧ್ಯಮ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಟ್ರಸ್ಟ್ ಕೋಶಾಧಿಕಾರಿ ವಿ.ಎಚ್.ಅಶ್ರಫ್, ಜೊತೆ ಕಾರ್ಯದರ್ಶಿ ಗಳಾದ ಇಸ್ಮಾಯಿಲ್ ಹಾಜಿ ಅಡ್ಡದಬೀದಿ ಮತ್ತು ಶರೀಫ್ ಫ್ಯಾನ್ಸಿ , ಟ್ರಸ್ಟ್ ಉಪಾಧ್ಯಕ್ಷ ಆರ್.ಕೆ.ಅಬ್ದುಲ್ಲಾ ಹಾಜಿ,ಇಮಾಮ್ ಅಬ್ಬಾಸ್ ಮದನಿ ಮುಂತಾದವರು ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು, ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಶಾಕಿರ್ ಅಳಕೆ ಮಜಲು ವಂದಿಸಿದರು





