December 18, 2025

ಮಂಗಳೂರು: ಬಾಲಕಿಯ ಮೃತದೇಹ‌ ಪತ್ತೆ: ಕೊಲೆಯಾಗಿರುವ ಶಂಕೆ, ಇಬ್ಬರು ವಶಕ್ಕೆ

n6254019991722958903506898dc5bd80f63fcb825303751c9d91cfc8219fc83578e3f00d863b7a52f8ba8b.jpg

ಮಂಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯ ಕುತ್ತಿಗೆ ಬಿಗಿದು ಹತ್ಯೆಗೈದ ಘಟನೆ ಮಂಗಳೂರು ಹೊರವಲಯದ ಜೋಕಟ್ಟೆ ಪ್ರದೇಶದಲ್ಲಿ ನಡೆದಿದೆ. ಕೊಲೆಯಾದ ಬಾಲಕಿ ಮೂಲತಃ ಬೆಳಗಾವಿ ಜಿಲ್ಲೆಯ ಸದ್ಯ ಜೋಕಟ್ಟೆಯಲ್ಲಿ ವಾಸವಾಗಿರುವ ಹನುಮಂತ ಎಂಬವರ ತಮ್ಮನ ಮಗಳು ಎಂದು ತಿಳಿದು ಬಂದಿದೆ.

ಬಾಲಕಿಯ ಕೊಲೆಗೆ ಸಂಬಂಧಿಸಿ ಬೆಳಗಾವಿ ಮೂಲದವರೇ ಆಗಿರುವ ಸದ್ಯ ಜೋಕಟ್ಟೆಯಲ್ಲಿ ವಾಸವಿರುವ ಫಕೀರಪ್ಪ (50) ಮತ್ತು ಶಾಂತಪ್ಪ ಎಂಬವರನ್ನು ಪಣಂಬೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯ ದೊಡ್ಡಪ್ಪ ಮತ್ತು ಫಕೀರಪ್ಪನ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಅನುಮಾನ ಗೊಂಡು ಫಕೀರಪ್ಪ ಹಾಗು ಶಾಂತಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳಕ್ಕೆ ಪಣಂಬೂರು ಪೊಲೀಸರು, ಫಾರೆನ್ಸಿಕ್‌ ವಿಭಾದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

You may have missed

error: Content is protected !!