ಮಂಗಳೂರು: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ:
ಕೇರಳದ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳ ಬಂಧನ
ಮಂಗಳೂರು: ಕೇರಳ ಮೂಲದ ಇಬ್ಬರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮಾರಾಟ ಉದ್ದೇಶದಿಂದ ಗಾಂಜಾ ಒಯ್ಯುತ್ತಿದ್ದಾಗ ಉಳ್ಳಾಲ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಉಳ್ಳಾಲದ ಕುಂಪಲದ ಬಳಿಯ ಬಗಂಬಿಲ ಎಂಬಲ್ಲಿ ಸ್ಕೂಟರಿನಲ್ಲಿ ಸಾಗುತ್ತಿದ್ದಾಗ ಪೊಲೀಸರು ತಪಾಸಣೆ ನಡೆಸಿದ್ದು, 220 ಗ್ರಾಮ್ ಗಾಂಜಾ ಜೊತೆಗೆ ಬಂಧಿಸಲಾಗಿದೆ. ಯೆನಪೋಯಾ ಡೆಂಟಲ್ ಕಾಲೇಜಿನ ವಿದ್ಯಾರ್ಥಿ, ತೃಶ್ಶೂರು ನಿವಾಸಿ ಆದರ್ಶ್ ಜ್ಯೋತಿ (22), ನಿಟ್ಟೆ ನರ್ಸಿಂಗ್ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿ, ಕೊಟ್ಟಾಯಂ ನಿವಾಸಿ ಯೋಯಲ್ ಜೋಯ್ಸ್ (22) ಬಂಧಿತರು.
ಸ್ಕೂಟರಿನಲ್ಲಿ ಗಾಂಜಾ ಇಟ್ಟುಕೊಂಡು ಸಾಗುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಎನ್ ಡಿಪಿಎಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿದ್ದಾರೆ.





