March 14, 2026

ಬಂಟ್ವಾಳ: ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ಹೊಡೆದಾಟ-ಚೂರಿ ಇರಿತ

0
47119260

ಬಂಟ್ವಾಳ: ಹಿಂದೂ ಸಂಘಟನೆಯ ಯುವಕರ ವೈಯಕ್ತಿಕ ವಿಚಾರವಾಗಿ ನಡೆದ ಹೊಡೆದಾಟ ನಡೆದು ಚೂರಿಯಿಂದ ಇರಿಯುವ ಮೂಲಕ ಕೊನೆಗೊಂಡಿದೆ.

ಬಿಸಿರೋಡಿನ ಹಿಂದೂ ಸಂಘಟನೆಯ ಯುವಕರ ತಂಡ ಹಾಗೂ ಬಂಟ್ವಾಳ ಹಿಂದೂ‌ಸಂಘಟನೆಯ ಯುವಕರ ತಂಡದ ನಡುವೆ ನಡೆದ ಗಲಾಟೆ ಚೂರಿ ಇರಿತದಲ್ಲಿ ಅಂತ್ಯಗೊಂಡ ಘಟನೆ ಇಂದು ಸಂಜೆ ಬಂಟ್ವಾಳ ‌ಬೈಪಾಸ್ ನಲ್ಲಿ ನಡೆದಿದ್ದು, ಘಟನೆಯಲ್ಲಿ ಇತ್ತಂಡಗಳ ಮೂವರು ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.


ಪೃಥ್ವಿರಾಜ್, ವಿನಿತ್ ಹಾಗೂ ಪುಷ್ಪರಾಜ್ ಎಂಬವರು ಗಾಯಗೊಂಡಿದ್ದು , ಉಳಿದಂತೆ ತಂಡದಲ್ಲಿ ಯಾರು ಯಾರು ಇದ್ದರು ಎಂಬುದು ಪೋಲೀಸರ ತನಿಖೆಯ ಬಳಿಕ ತಿಳಿಯಬೇಕು.


ಘಟನೆಗೆ ಸ್ಪಷ್ಟವಾದ ಕಾರಣವೇನು ಎಂಬುದು ಇನ್ನೂ ಕೂಡ ತಿಳಿದು ಬಂದಿಲ್ಲ. ಆದರೆ ಪೋಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ ಹುಡುಗಿ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ.


ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೋಲೀಸರು ಬೇಟಿ ನೀಡಿದ್ದು ಯಾವ ಕಾರಣಕ್ಕಾಗಿ ಗಲಾಟೆ ನಡೆದಿದೆ ಎಂಬ ಸ್ಪಷ್ಟವಾದ ‌ಮಾಹಿತಿ‌ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!