November 21, 2024

ವಯನಾಡ್ ದುರಂತ: ರಕ್ಷಣಾ ಕಾರ್ಯಗಳಿಗಾಗಿ 500 ಮಂದಿ‌ SDPI ಕಾರ್ಯಕರ್ತರ ನಿಯೋಜನೆ

0

ವಯನಾಡ್‌: ಕೇರಳದ ವಯನಾಡ್‌ ನಲ್ಲಿ ಸಂಭವಿಸಿದ ಭೀಕರ ಭೂಕುಸಿತ 300 ಜನರನ್ನು ಬಲಿ ಪಡೆದಿದೆ. ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಧಾವಿಸಿರುವ ಭಾರತೀಯ ಸೇನೆ, ಎನ್‌ಡಿಆರ್‌ಎಫ್‌ ಜೊತೆ ಎಸ್ ಡಿಪಿಐಯ ಸ್ವಯಂಸೇವಕರು ಸ್ಥಳೀಯರು ರಕ್ಷಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದಾರೆ.

500 ಮಂದಿ‌ ಎಸ್ ಡಿಪಿಐ ಸ್ವಯಂಸೇವಕರು ವಯನಾಡ್‌‌ನಲ್ಲಿ ದುರಂತ ಸಂಭವಿಸಿದ ಮೊದಲ ದಿನದಿಂದಲೇ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈಗ ಪುನಃ 500 ಸ್ವಯಂಸೇವಕರನ್ನು ರಕ್ಷಣಾ ಕಾರ್ಯಗಳಿಗಾಗಿ ಎಸ್ ಡಿಪಿಐ ನಿಯೋಜಿಸಿದೆ.

ಚಾಲಿಯಾರ್ ನದಿಯ ಎರಡು ಬದಿಗಳಲ್ಲಿ, ಬ್ಯಾಚ್ ಒಂದಕ್ಕೆ ತಲಾ 20 ಜನರಂತೆ, ನಿಯೋಗಿಸಿ, ನದಿ ಬದಿಗಳಲ್ಲಿ ಸಿಲುಕಿರಬಹುದಾದ ಮೃತ ದೇಹಗಳಿಗಾಗಿ ತೀವ್ರ ಹುಡುಕಾಟ ನಡೆಸುವ ಕಾರ್ಯಾಚರಣೆ ನಡೆಯಲಿದೆ.

SDPI ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!