ಸೇನಾ ಹೆಲಿಕಾಪ್ಟರ್ ಪತನ:
ಅಪಘಾತದ ದೃಶ್ಯ ಸೆರೆಹಿಡಿದ ಮೊಬೈಲ್ ವಿಧಿವಿಜ್ಞಾನ ಪರೀಕ್ಷೆಗೆ
ದೆಹಲಿ: ತಮಿಳುನಾಡಿನ ಕುನ್ನೂರಿನಲ್ಲಿ ಎಂಐ-17 ಹೆಲಿಕಾಪ್ಟರ್ ಪತನಗೊಳ್ಳುವ ಮುನ್ನ ಅದರ ಅಂತಿಮ ಕ್ಷಣಗಳನ್ನು ರೆಕಾರ್ಡ್ ಮಾಡಿದ್ದ ಪ್ರತ್ಯಕ್ಷದರ್ಶಿಯ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
ಡಿಸೆಂಬರ್ 8 ರಂದು ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು 11 ಸಶಸ್ತ್ರ ಪಡೆಗಳ ಸಿಬ್ಬಂದಿಗಳ ಹುತಾತ್ಮರಾಗಿದ್ದರು.
ಅಪಘಾತದಲ್ಲಿ ಬದುಕುಳಿದ ಏಕೈಕ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಇನ್ನೂ ಗಂಭೀರವಾಗಿದ್ದು, ಬೆಂಗಳೂರು ಮೂಲದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





