ಬಂಟ್ವಾಳ: ಕಲ್ಲಡ್ಕ- ಬೋಳಂತೂರು ರಸ್ತೆ ಮಧ್ಯೆ ಉರುಳಿದ ಮರ
ಬಂಟ್ವಾಳ: ಕಳೆದ ಮೂರು ದಿನಗಳಿಂದ ನಿರಂತರವಾಗಿರುವ ಗಾಳಿ ಮಳೆಯಿಂದಾಗಿ ಪಿಲಿಂಜ ಕಲ್ಲಡ್ಕ- ಬೋಳಂತೂರು ರಸ್ತೆ ಮಧ್ಯೆ ಮರವೊಂದು ಉರುಳಿ ಬಿದ್ದಿದೆ.
ಇದರಿಂದ ವಾಹನ ಸಂಚಾರ, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದ್ದು, ತಕ್ಷಣವೇ ವಿಷಯ ಅರಿತ ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯ ಅಮರ್ ಹಾರಿಸ್ ಅವರು ಕಾರ್ಯಪ್ರವೃತ್ತರಾಗಿ ಮರವನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.




