ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಭಾರೀ ಭೂಕುಸಿತ: ಮೂರು ಮನೆಗಳಿಗೆ ಹಾನಿ
ಪುತ್ತೂರು: ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಭಾರೀ ಭೂಕುಸಿತ ಸಂಭವಿಸಿ ಮೂರು ಮನೆಗಳಿಗೆ ಹಾನಿಯಾದ ಘಟನೆ ನಡೆದಿದೆ.
ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿನ ಗಂಗಯ್ಯ ಗೌಡ, ಮಹಾಬಲ ಗೌಡ ಎಂಬವರಿಗೆ ಸೇರಿದ ಮನೆ ಮೇಲೆ ಭೂಕುಸಿತ ಉಂಟಾಗಿದೆ. ಈ ವೇಳೆ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.
ಬೆಳ್ಳಿಪ್ಪಾಡಿಗ್ರಾಮದ ಕೋರಿಯ ವಿಶ್ವನಾಥ ಪೂಜಾರಿ ಎಂಬವರ ಮನೆಗೂ ಹಾನಿಯಾಗಿದೆ. ಗಂಗಯ್ಯ ಗೌಡ ಎಂಬವರ ಹಟ್ಟಿ ಮೇಲೆ ಭೂಕುಸಿತ ಉಂಟಾಗಿ ನಾಲ್ಕು ಜಾನುವಾರು ಸಾವನಪ್ಪಿದೆ.
ಮಹಾಬಲ ಗೌಡ ಅವರ ದನದ ಹಟ್ಟಿಗೂ ಧರೆ ಕುಸಿದು ಮಣ್ಣಿನಡಿ ಎರಡು ದನಗಳು ಸಿಲುಕಿದ್ದು, ಜಾನುವಾರುಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.




