ರಾತ್ರೋರಾತ್ರಿ ಉಕ್ಕಿ ಹರಿದ ನದಿ: ಅಂಗಡಿ, ಮನೆಯ ಹಟ್ಟಿಗಳು ಮುಳುಗಡೆ
ಮುಂಡ್ಕೂರು: ರಾತ್ರೋರಾತ್ರಿ ಸಂಕಲಕರಿಯ ಶಾಂಭವಿ ನದಿ ಉಕ್ಕಿ ಹರಿದಿದ್ದು ಅಂಗಡಿ, ಮನೆಯ ಹಟ್ಟಿಗಳು ಮುಳುಗಡೆಗೊಂಡಿದ್ದು, ಸಂಕಲಕರಿಯ -ಉಗ್ಗೆದಬೆಟ್ಟು ಸಂಪರ್ಕ, ಪಟ್ಟೆ-ಏಳಿಂಜೆ ಸಂಪರ್ಕ ಕಡಿತಗೊಂಡಿದೆ.
ಅಲ್ಲದೆ ನೀರಿನ ಪ್ರಮಾಣ ಏರಿಕೆಯಾದ ಪರಿಣಾಮ ಶಿವಮೊಗ್ಗ ಮೂಲದ ಟ್ರಾಕ್ಟರ್ ಮಾಲಕ ಮಾಲತೇಶ್ ಅವರ ಕೊಠಡಿ ಪ್ರವಾಹದಿಂದ ಮುಳುಗಡೆಯಾಗಿದ್ದು, ಸಹಸ್ರಾರು ರೂಪಾಯಿ ಮೌಲ್ಯದ ವಸ್ತುಗಳು ನಷ್ಟವಾಗಿದೆ, ಜೊತೆಗೆ ಪಟ್ಟೆ ಕ್ರಾಸ್ ಬಳಿ ಇರುವ ನಂದೀಶ್ ಅವರ ಕೋಳಿ ಅಂಗಡಿ ಕೂಡ ಮುಳುಗಡೆಯಾಗಿದ್ದು ಅಂಗಡಿಯಲ್ಲಿದ್ದ ಕೋಳಿಗಳು ಸಾವನ್ನಪ್ಪಿದೆ.





