ಪುತ್ತೂರಿನ APMC ರಸ್ತೆ ಜಲಾವೃತ: ವಾಹನ ಸಂಚಾರ ಅಸ್ತವ್ಯಸ್ತ
ಪುತ್ತೂರು: ಬೆಳಿಗ್ಗೆಯಿಂದ ಸುರಿದ ಧಾರಾಕಾರ ಮಳೆಗೆ ಪುತ್ತೂರಿನ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಕುಂಬ್ರ – ಪುತ್ತೂರು ಸಂಪರ್ಕಿಸುವ ಶೇಖಮಲೆಯಲ್ಲಿ ಗುಡ್ಡ ಜರಿದಿದ್ದು ಕೆಲ ಕಾಲ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು.
ಎಪಿಎಂಸಿ ರಸ್ತೆಯ ಸಾಯ ಎಂಟರ್‌ಪ್ರೈಸಸ್ ಮುಂಭಾಗದಲ್ಲಿ ಮಳೆ ನೀರು ಹರಿಯಲು ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯೇ ಹೊಳೆಯಂತೆ ಮಾರ್ಪಾಡಾಗಿದೆ. ಮಳೆ ನೀರಿಗೆ ರಸ್ತೆ ಕಾಣಿಸದೇ ಇದ್ದು, ಇದು ರಸ್ತೆಯೋ ಅಥವಾ ಹೊಳೆಯೋ ಎಂಬಂತೆ ಕಾಣುತ್ತಿದೆ.
ಈ ರಸ್ತೆಯಲ್ಲಿ ಚಲಿಸುವ ವಾಹನಗಳ ಚಕ್ರಗಳು ನೀರಲ್ಲಿ ಮುಳುಗಿ ಹೋಗಿದೆ. ಇನ್ನು ಪಾದಾಚಾರಿಗಳಂತೂ ಈ ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲದಂತಾಗಿದೆ. ರಸ್ತೆ ತಂಬಾ ಮಳೆ ನೀರು ಹರಿಯುತ್ತಿದ್ದು ಜನರು ಅಪಾಯದ ಭೀತಿಯಲ್ಲಿದ್ದಾರೆ. ಇನ್ನೂ ಪುತ್ತೂರು ಎಪಿಎಂಸಿ ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು ಪುತ್ತೂರು-ಎಪಿಎಂಸಿ ಯನ್ನು ರಸ್ತೆಯನ್ನು ಬಂದ್ ಮಾಡಲಾಗಿದೆ.





