December 15, 2025

ಮಂಗಳೂರು: ಭಾರೀ ಗಾಳಿ ಮಳೆಗೆ ಅವಾಂತರ: ಕೊಟ್ಟಾರದಲ್ಲಿ ಹಾರಿ ಹೋದ ಕಟ್ಟಡದ ಮೇಲ್ಚಾವಣಿ

0
image_editor_output_image-745344145-1722320158642.jpg

ಮಂಗಳೂರು: ನಗರದ ಕೊಟ್ಟಾರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕಟ್ಟಡದ ಮೇಲ್ಚಾವಣಿ ಭಾರಿ ಗಾಳಿಗೆ ಹಾರಿ ಹೋಗಿದ್ದು ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ.

ಮಂಗಳೂರು : ಮಂಗಳೂರಿನಲ್ಲಿ ಬೆಳಗ್ಗಿನ ಜಾವ ಸುರಿದ ಭಾರಿ ಗಾಳಿ ಮಳೆ ಅವಾಂತರ ಸೃಷ್ಟಿಸಿದ್ದು ಅನೇಕ ಕಡೆ ಸಮಸ್ಯೆಗಳನ್ನೇ ಸೃಷ್ಟಿಸಿದೆ.

ನಗರದ ಕೊಟ್ಟಾರ ರಾಷ್ಟ್ರೀಯ ಹೆದ್ದಾರಿ ಪಕ್ಕದ Auto world tower ಕಟ್ಟಡದ ಮೇಲ್ಚಾವಣಿ ಭಾರಿ ಗಾಳಿಗೆ ಹಾರಿ ಹೋಗಿದ್ದು ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ. ಮಂಗಳವಾರ ಬೆಳಗ್ಗಿನ ಜಾವ ಈ ಘಟನೆ ನಡೆದ ಕಾರಣ ಭಾರಿ ಪ್ರಾಣ ಹಾನಿ ತಪ್ಪಿದೆ. ಕಟ್ಟಡದ ಶೀಟ್, ಕಬ್ಬಿಣದ ಪಟ್ಟಿಗಳು ಹೆದ್ದಾರಿಗೂ ಗಾಳಿಗೆ ತೂರಿ ಬಂದಿದ್ದುವು. ಕಟ್ಟಡವಲ್ಲದೆ ಅಕ್ಕಪಕ್ಕದ ಅಂಗಡಿಗಳಿಗೂ,ವಿದ್ಯುತ್ ಕಂಬಗಳಿಗೂ ಹಾನಿಯುಂಟು ಮಾಡಿದೆ. ಘಟನಾ ಸ್ಥಳಕ್ಕೆ ಸ್ಥಳಿಯ ಪೊಲೀಸ್, ಪಾಲಿಕೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!