ಚಾರ್ಮಾಡಿ ಘಾಟ್ ರಸ್ತೆಗೆ ಬಿದ್ದ ಬೃಹದಾಕಾರದ ಮರ..!ಮೂಡಿಗೆರೆ-ಮಂಗಳೂರು ರಸ್ತೆ ಬಂದ್..!
ಚಾರ್ಮಾಡಿ: ಮಲೆನಾಡು ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಆತಂಕ ಹೆಚ್ಚಾಗಿದೆ. ಇದೀಗ ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬೃಹದಾಕಾರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಪರಿಣಾಮ ಮೂಡಿಗೆರೆ-ಮಂಗಳೂರು ರಸ್ತೆ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ಅಪಾಯದ ಮಟ್ಟಕ್ಕೆ ತಲುಪುತ್ತಿರುವ ನೇತ್ರಾವತಿ..! ಗ್ರಾಮಾಂತರ ಶಾಲಾ ಪ್ರದೇಶಗಳಿಗೆ ತಹಶೀಲ್ದಾರ್ ಎಚ್ಚರಿಕೆ
ರಾ.ಹೆ 17ರ ಚಾರ್ಮಾಡಿ ಘಾಟಿಯಲ್ಲಿ ಬೃಹತ್ ಗಾತ್ರ ಮರವೊಂದು ಬಿದ್ದಿದ್ದು ಸಾಲುಗಟ್ಟಲೆ ವಾಹನಗಳು ಅಲ್ಲೇ ನಿಂತಿದೆ. ಇದರಿಂದ ಕಂಪ್ಲೀಟ್ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಮರ ತೆರವಿನ ಕಾರ್ಯಾಚರಣೆ ನಡೆಯುತ್ತಿದ್ದು ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದೆ. ಇನ್ನು ಚಾರ್ಮಾಡಿ ಘಾಟ್‌ಗಳಲ್ಲಿ ಗುಡ್ಡ ಪ್ರದೇಶಗಳು ಇರುವುದರಿಂದ ಅಲ್ಲಲ್ಲಿ ಗುಡ್ಡ ಕುಸಿತಗಳು ಸಣ್ಣ ಮಟ್ಟದಲ್ಲಿ ಉಂಟಾಗಿತ್ತು.





