ಮೂಡುಬಿದಿರೆ: ಕಾರು ಢಿಕ್ಕಿಯಾಗಿ ಸವಾರ ಸಾವು
ಮೂಡುಬಿದಿರೆ: ಕಾರು ಡಿಕ್ಕಿ ಹೊಡೆದು ಸೈಕಲ್ ಸವಾರ ಮೃತಪಟ್ಟ ಘಟನೆ ಮೂಡುಬಿದಿರೆಯ ಪುತ್ತಿಗೆ ಪದವು ಹಂಡೇಲು ಬಳಿ ಶುಕ್ರವಾರ(ಜು.26) ಸಂಭವಿಸಿದೆ. ರಮೇಶ್ ಅಂಚನ್ (65) ಮೃತಪಟ್ಟವರು.
ರಮೇಶ್ ಹಲವು ದಶಕಗಳಿಂದ ಮೂಡುಬಿದಿರೆ ಮಾರ್ಕೇಟಿನ ವಾರದ ಸಂತೆಯಲ್ಲಿ ಚಕ್ಕುಲಿ ಸಹಿತ ಕರಿದ ತಿಂಡಿ ತಿನಿಸುಗಳು, ತುಳುವರ ಪ್ರೀತಿಯ ಸೋಜಿ ಸಹಿತ ಪಾನೀಯಗಳ ವರ್ತಕರಾಗಿ ಜನಾನುರಾಗಿಯಾಗಿದ್ದರು.
ಪುತ್ತಿಗೆ ಪದವು ಹಂಡೇಲು ಬಳಿ ಸಂಜೆ ಸೈಕಲಲ್ಲಿ ಹೋಗುತ್ತಿದ್ದ ಅವರಿಗೆ ಕಲ್ಲಮುಂಡ್ಕೂರು ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ತಲೆ, ಕಾಲಿಗೆ, ತೀವ್ರ ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಇಹಲೋಕ ತ್ಯಜಿಸಿದ್ದಾರೆ.





