ಬೆಂಗಳೂರಿಗೆ ಬಂದದ್ದು, ನಾಯಿ ಮಾಂಸ ಅಲ್ಲ, ಮೇಕೆ ಮಾಂಸ ಎಂಬುದು ದೃಢ: ಗೃಹ ಸಚಿವ ಡಾ.ಜಿ ಪರಮೇಶ್ವರ ಸ್ಪಷ್ಟನೆ
ದಾವಣಗೆರೆ : ರಾಜಸ್ಥಾನದಿಂದ ಬೆಂಗಳೂರಿಗೆ ಬಂದ್ದಿದ್ದು, ನಾಯಿ ಮಾಂಸ ಅಲ್ಲ, ಮೇಕೆಯ ಮಾಂಸ ಎಂಬುದು ವರದಿಯಲ್ಲಿ ದೃಢವಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿಗೆ ರೈಲುಗಳ ಮೂಲಕ ನಾಯಿ ಮಾಂಸ ಸರಬರಾಜು ಆರೋಪ ಪ್ರಕರಣ ಸಂಬಂಧ ಜಿ.ಪರಮೇಶ್ವರ್ ಅವರು ರವಿವಾರ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ರಾಜಸ್ಥಾನದ ಮಾಂಸ ಮಾರಾಟಗಾರರು ಮೇಲೆ ನಾಯಿ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ಅಪಾದನೆ ಮಾಡಲಾಗಿತ್ತು. ಅದರೆ, ವರದಿ ಕೈಸೇರಿದ್ದು ಅದು ಮೇಕೆ ಮಾಂಸ ಎಂದು ಗೊತ್ತಾಗಿದೆ. ಅನಾವಶ್ಯಕವಾಗಿ ದುರುದ್ದೇಶದಿಂದ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದರು.





