February 1, 2026

ಪುತ್ತೂರು: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ರಾಡ್ ನಿಂದ ಹಲ್ಲೆ: ಆರೋಪಿಯ ಬಂಧನ

0
image_editor_output_image-729477666-1722150952725.jpg

ಪುತ್ತೂರು: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ ಘಟನೆ ಪುತ್ತೂರಿನ ಬನ್ನೂರಿನಲ್ಲಿ ನಡೆದಿದೆ.

ಬನ್ನೂರಿನಲ್ಲಿ ತಾಯಿ ಮಗನ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ವಿಚಾರಣೆಗೆಂದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಆರೋಪಿಯ ತಾಯಿ ಚಂದ್ರಾವತಿ ಅವರನ್ನ ಮನೆಯಲ್ಲಾದ ಗಲಾಟೆಯ ಬಗ್ಗೆ ಪೊಲೀಸರು ವಿಚಾರಿಸಿದ್ದಾರೆ.

ಮನೆಯ ಒಳಗಿನಿಂದ ಬಂದ ಆರೋಪಿ ತೇಜಸ್ ಪೊಲೀಸರು ನಮ್ಮ ಮನೆಗೆ ಯಾಕೆ ಬಂದಿದ್ದಿರಿ ಎಂದು ಅವ್ಯಾಚ್ಯವಾಗಿ ಬೈದಿದ್ದಾನೆ. ಇಷ್ಟೇ ಅಲ್ಲದೇ ಪೊಲೀಸರ ಕಾರಿಗೆ ಮನೆಯಲ್ಲಿದ್ದ ಒಂದು ಕಾರನ್ನ ಅಡ್ಡವಾಗಿ ಇಟ್ಟು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿ ನಿಂದಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ಪೊಲೀಸ್ ಸಿಬ್ಬಂದಿ ವಿನಾಯಕ ಅವರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಕೆದಂಬಾಡಿ ಗ್ರಾಮದ ಶೀನಪ್ಪ ಗೌಡ ಎಂಬವರ ದೂರಿನಂತೆ ತೇಜಸ್ ನ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಆರೋಪಿ ತೇಜಸ್ ನನ್ನ ಬಂಧಿಸಿಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!