February 2, 2026

ಉಳ್ಳಾಲ: ನಾಪತ್ತೆಯಾಗಿದ್ದ ಆಟೋ ಚಾಲಕ ಪತ್ತೆ

0
image_editor_output_image1905752329-1722061604693.jpg

ಉಳ್ಳಾಲ: ರಿಕ್ಷಾ ಬಾಡಿಗೆ ತೆರಳಿದ್ದ ಬಳಿಕ ನಾಪತ್ತೆಯಾಗಿದ್ದ ಆಟೋ ಚಾಲಕರೊಬ್ಬರು ಇದೀಗ ತೊಕ್ಕೊಟ್ಟು ಸಮೀಪದ ಸಂಕೊಲಿಗೆ ಬಳಿ ಪತ್ತೆಯಾಗಿದ್ದಾರೆ.

ಉಳ್ಳಾದ ಮಡ್ಯಾರ್ ನಿವಾಸಿ ಮೆಲ್ವಿನ್ ಮೋಂತೆರೋ (56) ನಾಪತ್ತೆಯಾಗಿದ್ದವರು.

ಮೆಲ್ವಿನ್ ಮೋಂತೆರೋ ಅವರು ಕೋಟೆಕಾರಿನ ಖಾಸಗಿ ಶಾಲೆಯೊಂದರ ಬಳಿ ರಿಕ್ಷಾ ಬಾಡಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು. ರಾತ್ರಿಯಾದರೂ ಮನೆಗೂ ವಾಪಸ್ ಬಾರದೆ ಇದ್ದಾಗ ಮನೆ ಮಂದಿ ಆತಂಕಗೊಂಡು ಬಂಧಿಕರ ಬಳಿ ವಿಚಾರಿಸಿದಾಗಲೂ ಪತ್ತೆಯಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಮೆಲ್ವಿನ್ ಮೋಂತೆರೋ ಅವರ ಪತ್ನಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಅವರು ಸಂಕೊಲಿಗೆ ಬಳಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

Leave a Reply

Your email address will not be published. Required fields are marked *

error: Content is protected !!